ಮಾಧ್ಯಮಗಳ ಮುಂದೆ ಅಸಭ್ಯವಾಗಿ ಮಾತಾನಾಡಿದ ಯೋಗಿ ಆದಿತ್ಯನಾಥ್ | ವೀಡಿಯೋ ಹಿಂಪಡೆದುಕೊಂಡಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಯೋಗಿ ಆದಿತ್ಯನಾಥ್ ಅಸಭ್ಯ ಮಾತನ್ನಾಡಿರುವುದು ಬೆಳಕಿಗೆ ಬಂದಿದೆ.

ಕೋವಿಡ್ ಲಸಿಕೆ ಸ್ವೀಕರಿಸಿ, ಎಎನ್ಐ ಸುದ್ದಿ ಸಂಸ್ಥೆಯ ಜೊತೆ ಮಾತನಾಡುತ್ತಿದ್ದ ವೇಳೆ ಯೋಗಿ ಆದಿತ್ಯನಾಥ್ ಬಾಯಿಂದ ಅಸಭ್ಯ ಮಾತು ಹೊರಡಿದೆ. ಎಎನ್ಐಯು ವೀಡಿಯೋವನ್ನು ಹಿಂತೆಗೆದು ಕೊಂಡಿದ್ದರೂ, ಹಿಂತೆಗೆದುಕೊಳ್ಳುವ ಮೊದಲೇ ಡೌನ್ಲೋಡ್ ಮಾಡಲಾದ ವೀಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ಕೋವಿಡ್ ಲಸಿಕೆ ಸ್ವೀಕರಿಸಿದ ನಂತರದ ಯೋಗಿಯ ಮಾತುಗಳನ್ನು ಎಎನ್ಐಯು ಇನ್ನೊಂದು ಸಲ ವೀಡಿಯೋ ಮಾಡಿ, ‘ವೀಡಿಯೋ ಬೈಟ್ಎಂಬ ಶೀರ್ಷಿಕೆಯೊಂದಿಗೆ  ಪ್ರಕಟಿಸಿದೆ. ವೇಳೆಯಲ್ಲಿ ಬ್ರಾಕೆಟಿನೊಳಗೆ, “ಸಂಪಾದಕರ ವಿವರಣೆ: ಮೊದಲ ಲೈವ್ ಸೌಂಡ್ ಬೈಟನ್ನು ಹಿಂತೆಗೆದುಕೊಳ್ಳಲಾಗಿದೆಎಂಬ ಬರಹವನ್ನೂ ಸೇರಿಸಲಾಗಿದೆ.

ಲಸಿಕೆ ಸ್ವೀಕರಿಸಿದ ಬಳಿಕ ಮಾತನಾಡಿದ ಯೋಗಿ, ಸ್ವದೇಶೀ ನಿರ್ಮಿತ ಕೊರೋನಾ ಲಸಿಕೆಯನ್ನು ತಾನು ಸ್ವೀಕರಿಸಿರುವೆ. ಪ್ರತಿಯೊಬ್ಬರೂ ಇದನ್ನು ಪಡೆದುಕೊಂಡು ಉತ್ತರ ಪ್ರದೇಶವನ್ನು ಕೊರೋನಾ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು