ಅನಿವಾಸಿ ಭಾರತೀಯರಿಗೆ “ಮದಾದ್” ಸೇವೆಯನ್ನು ಬಳಸುವಂತೆ ಕೋರಿಕೆ

madad
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಲ್ಫ್ ನ್ಯೂಸ್(15-10-2020): ಕುವೈತಿನಲ್ಲಿರುವ ಅನಿವಾಸಿ ಭಾರತೀಯರು ದೂತವಾಸಕ್ಕೆ ಸಂಬಂಧಿಸಿದ ವ್ಯವಹಾರಗಳಿಗೆ “ಮದಾದ್” ಅನ್ನು ಬಳಸಬೇಕೆಂದು ಕುವೈತಿನಲ್ಲಿರುವ ಭಾರತೀಯ ದೂತವಾಸವು ಕೇಳಿಕೊಂಡಿದೆ.

ಮದಾದ್ ಎನ್ನುವುದು ವಿದೇಶಾಂಗ ಇಲಾಖೆಯು 2015 ರಲ್ಲಿ ಆರಂಭಿಸಿದ ದೂತವಾಸ ಸೇವೆಗಳ ನಿರ್ವಹಣಾ ವ್ಯವಸ್ಥೆ. ಜೊತೆಗೆ ಮದಾದ್ ಮೊಬೈಲ್ ಅಪ್ಲಿಕೇಶನ್ ಕೂಡಾ ಲಭ್ಯವಿದೆ.

ನ್ಯಾಯಾಲಯದ ವ್ಯವಹಾರಗಳು, ನಷ್ಟ ಪರಿಹಾರ, ಮನೆಗೆಲಸಗಾರರ ಸಮಸ್ಯೆಗಳು, ವಿದೇಶದಲ್ಲಿ ಜೈಲುಗಳಲ್ಲಿರುವವರ ಸಮಸ್ಯೆಗಳು, ಮೃತದೇಹಗಳನ್ನು ಊರಿಗೆ ತಲುಪಿಸುವುದರ ಬಗ್ಗೆ, ವೇತನ ಸಂಬಂಧಿ ವಿಚಾರಗಳು, ಊರಿಗೆ ತೆರಳುವ ಬಗ್ಗೆ, ನಾಪತ್ತೆಯಾದವರನ್ನು ಪತ್ತೆ ಹಚ್ಚುವುದು ಇತ್ಯಾದಿಗಳಿಗೆ ಮದಾದ್ ಮೂಲಕ ದೂರು ಸಲ್ಲಿಸಬಹುದೆಂದು ಅದು ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು