ಲುಲು ಗ್ರೂಪಿನಲ್ಲಿ ಹೂಡಿಕೆ ಮಾಡಲು ಸೌದಿ ಸಿದ್ಧತೆ

lulu
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸೌದಿಅರೇಬಿಯಾ(08-10-2020): ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ಲುಲು ಗ್ರೂಪಿನಲ್ಲಿ ಹೂಡಿಕೆ ಮಾಡಲು ತಯಾರಿ ನಡೆಸಿರುವುದಾಗಿ ರೋಯ್ಟರ್ಸ್ ವರದಿ ಮಾಡಿದೆ. ಲುಲು ಗ್ರೂಪ್ ಚಯರ್ ಮ್ಯಾನ್ ಎಮ್ ಎ ಯೂಸುಫ್ ಆಲಿ ಜೊತೆಗೆ ಸೌದಿ ಸರಕಾರದ ಅಧೀನದಲ್ಲಿರುವ ಪಿಐಎಫ್ ಈ ವಿಚಾರವಾಗಿ ಚರ್ಚೆ ನಡೆಸುತ್ತಿದೆಯೆಂದು ವರದಿ ಹೇಳುತ್ತಿದೆ.

ಲುಲು ಘಟಕಗಳು ಈಗಾಗಲೇ ಸೌದಿ ಅರೇಬಿಯಾದಲ್ಲಿ ಕಾರ್ಯಾಚರಿಸುತ್ತಿದ್ದು, ಎಷ್ಟು ಪ್ರಮಾಣದಲ್ಲಿ ಪಿಐಎಫ್ ಹೂಡಿಕೆ ಮಾಡಿಲಿದೆಯೆಂದು ಬಹಿರಂಗವಾಗಿಲ್ಲ. ಈ ಬಗ್ಗೆ ಲುಲು ಗ್ರೂಪಿನಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಲುಲು ಮಾತ್ರವಲ್ಲದೇ ರಿಲಯನ್ಸ್ ನಂತಹ ಬೃಹತ್ ವಿದೇಶೀ ಕಂಪೆನಿಗಳಲ್ಲೂ ಹೂಡಿಕೆ ಮಾಡಲು ಪಿಐಎಫ್ ಉತ್ಸುಕವಾಗಿದೆ. ತೈಲೇತರ ಆದಾಯ ಮತ್ತು ವಿದೇಶೀ ಹೂಡಿಕೆಯನ್ನು ಗುರಿಯಾಗಿಸಿ, ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನರಿಂದ ರೂಪುಗೊಂಡ ಸಾರ್ವಜನಿಕ ನಿಧಿಯೇ ಈ ಪಿಐಎಫ್ ಎನ್ನುವುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು