ಲೂಡೋ ನಿಷೇಧಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ | ಅದೊಂದು ಜೂಜಾಟವೆಂಬ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಪ್ರಸಿದ್ಧ ಆಟವಾಗಿರುವ ಲೂಡೋ ಗೇಮನ್ನು ನಿಷೇಧಿಸಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸದಸ್ಯನಾಗಿರುವ ಕೇಶವ್ ಮೂಲೆ ಎಂಬಾತನೇ ನ್ಯಾಯಾಲಯದ ಮೆಟ್ಟಿಲೇರಿದ ವ್ಯಕ್ತಿ. ಈತ ಬಾಂಬೆ ಹೈಕೋರ್ಟಿನ ಕದ ತಟ್ಟಿರುತ್ತಾನೆ.

ಲೂಡೋ ಒಂದು ಜೂಜಾಟವಾಗಿದೆ. ಅದು ನೈಪುಣ್ಯ ಅಥವಾ ಸಾಮಾರ್ಥ್ಯದಿಂದ ಗೆಲುವು ಸಾಧಿಸುವ ಆಟವಲ್ಲ. ಬದಲು ಅದೃಷ್ಠದಿಂದ ಗೆಲುವು ಪಡೆಯುವ ಆಟ. ಹಾಗಾಗಿ ಲೂಡೋ ಗೇಮನ್ನು ಅದೃಷ್ಠದಿಂದ ಗೆಲ್ಲುವ ಆಟ ಎಂಬದಾಗಿ ಘೋಷಣೆ ಮಾಡಬೇಕೆಂದು ಕೇಶವ್ ಮೂಲೆ ತನ್ನ ಅರ್ಜಿಯಲ್ಲಿ ಆಗ್ರಹಿಸಿದ್ದಾನೆ.

ಲೂಡೋ ಸುಪ್ರೀಮ್ ಆ್ಯಪ್ ಎಂಬ ಮೊಬೈಲ್ ಆವೃತ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಲುಡೋ ಸುಪ್ರೀಂ ಎಂಬ ಆನ್ಲೈನ್ ಗೇಮಿನಲ್ಲಿ ನಾಲ್ಕು ಜನರು ಆಡಬೇಕಾಗುತ್ತದೆ. ಈ ನಾಲ್ಕೂ ಜನರಿಂದ ತಲಾ 5 ರೂಪಾಯಿಗಳಂತೆ ವಸೂಲಿ ಮಾಡಲಾಗುತ್ತದೆ. ಆದರೆ ಗೆದ್ದವನಿಗೆ 17 ರೂಪಾಯಿ ಗಳಷ್ಟೇ ದೊರೆಯುವುದು. ಇನ್ನುಳಿದ ಮೂರು ರೂಪಾಯಿಗಳು ಗೇಮ್ ಆ್ಯಪ್ ನಿರ್ಮಿಸಿದ ಕಂಪೆನಿ ಪಾಲಾಗುವುದು. ಇದೊಂದು ಸುಲಿಗೆಯಾಗಿದ್ದು, ಜೂಜು ನಿಷೇಧ ಕಾಯ್ದೆ – 3, 4, 5 ಗಳಡಿಯಲ್ಲಿ ಲೂಡೋ ಆನ್ಲೈನ್ ಗೇಮನ್ನೂ ಸೇರಿಸಬೇಕೆಂದು ನ್ಯಾಯಾಲಯವನ್ನು ಕೇಳಿಕೊಂಡಿದ್ದಾನೆ.

ಮೊದಲು ಮೆಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದ ಯುವಕ, ಅಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದಾಗ, ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾನೆ. ಸದ್ಯ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಬಾಕಿಯಾಗಿರುವ ಹಲವರು, ಬೇಸರ ಕಳೆಯಲು ಇಂತಹಾ ಆನ್ಲೈನ್ ಗೇಮುಗಳ ಮೊರೆ ಹೋಗಿದ್ದಾರೆ. ಇಂತಹ ವಿಚಾರಗಳನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿರುವುದನ್ನು ಕೆಲವರು ಟೀಕಿಸಿದ್ದಾರೆ.

ಆನ್ಲೈನ್ ಜೂಜಾಟವು ಸಾಮಾಜಿಕ ಪಿಡುಗಾಗಿದ್ದು, ಯುವಕರು ಇದಕ್ಕೆ ಬಲಿ ಬೀಳುತ್ತಿದ್ದಾರೆ ಎನ್ನುವುದು ದೂರುದಾರನ ವಾದ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಿಯೇ ತೀರುತ್ತೇನೆಂದು ಯುವಕ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದ್ದಾನೆ. ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಜೂನ್ 22 ಕ್ಕೆ ನಿಗದಿಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು