ನವದೆಹಲಿ(24-02-2021): ದೇಶದಲ್ಲಿ ಪೆಟ್ರೋಲ್-ಡಿಸೇಲ್, ಗ್ಯಾಸ್ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಈ ಮಧ್ಯೆ ಎಲ್ಪಿಜಿ ಗ್ರಾಹಕರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಸರಕಾರ ಸದ್ದಿಲ್ಲದೆ ನಿಲ್ಲಿಸಿದೆ ಎನ್ನಲಾಗಿದೆ. .
ಸಬ್ಸಿಡಿ ನಿಲ್ಲಿಸಿದ ಬಗ್ಗೆ ಸರಕಾರ ಅಧಿಕೃತವಾಗಿ ಹೇಳದಿದ್ದರೂ ಕಳೆದ ಮೇ. ತಿಂಗಳಿನಿಂದ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೀಡಿಲ್ಲ.
ಸಬ್ಸಿಡಿ ನೀಡದಿರುವ ಬಗ್ಗೆ ಪರೋಕ್ಷವಾಗಿ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಹೇಳಿದ್ದು, ಎಲ್ಪಿಜಿ ಸಬ್ಸಿಡಿ ನಿಲ್ಲಿಸಿದ್ದೇವೆ ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.