ಉತ್ತರಖಂಡ್ (22-11-2020): ಲವ್ ಜಿಹಾದ್ ಪದ ಬಳಕೆ ಮಾಡಿ ಲವ್ ಜಿಹಾದ್ ನಿಷೇಧದ ಬಗ್ಗೆ ಬಿಜೆಪಿ ಆಡಳಿತದ ರಾಜ್ಯಗಳು ರಾಜಕೀಯವನ್ನು ಮಾಡುತ್ತಿದ್ದರೆ ಇನ್ನೊಂದು ಕಡೆ ಅಂತರ್ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಧನ ನೀಡಲು ಉತ್ತರಖಂಡ್ ಸರಕಾರ ಮುಂದಾಗಿದೆ.
ಅಂತರ್ಧರ್ಮೀಯ ವಿವಾಹಕ್ಕೆ 50,000ರೂ.ಪ್ರೋತ್ಸಾಹಧನ ನೀಡಲು ಉತ್ತರಖಂಡ್ ಸರಕಾರ ಮುಂದಾಗಿದೆ.
ಕಾನೂನಾತ್ಮಕವಾಗಿ ಅಂತರ್ಧರ್ಮೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಲು ಉತ್ತರಖಂಡ್ ಸರಕಾರ ಈ ಮಹತ್ವದ ಹೆಜ್ಜೆಗೆ ಮುಂದಾಗಿದೆ.
ಇನ್ನು ನೂತನ ನಿಯಮದಲ್ಲೂ ನಿಬಂಧನೆಗಳಿದ್ದು, ಸಂವಿಧಾನದ ವಿಧಿ 341ರಲ್ಲಿ ಉಲ್ಲೇಖಿಸಿರುವ ಪ್ರಕಾರ ವಿವಾಹದ ಜೋಡಿಗಳಲ್ಲಿ ಪರಿಶಿಷ್ಟ ಜಾತಿಗೆ ಓರ್ವರು ಸೇರಿದವರಾಗಿರಬೇಕಾಗಿದೆ. ವಿವಾಹವಾಗಿ ಒಂದು ವರ್ಷದವರೆಗೆ ಈ ಸೌಲಭ್ಯ ಸಿಗಲಿದೆ.