ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯ ಬೆನ್ನಲ್ಲೇ ಮೂರನೇ ಕೇಸ್ ಇಂದು ದಾಖಲಾಗಿದೆ. ನಿನ್ನೆಯಷ್ಟೇ ಮುಸ್ಲಿಂ ವ್ಯಕ್ತಿಯೊಬ್ಬರ ವಿರುದ್ಧ ಶರೀಫ್ನಗರ ಗ್ರಾಮದ ಹಿಂದೂ ವ್ಯಕ್ತಿಯೋರ್ವ ತನ್ನ ಮಗಳಿಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದಾನೆ. ಮುಜಫರ್ನಗರ ಜಿಲ್ಲೆಯಲ್ಲಿ ಧರ್ಮ ಪರಿವರ್ತನೆ ನಿಷೇಧದ ಅಧಿನಿಯಮದಲ್ಲಿ ಇಬ್ಬರು ಮುಸ್ಲಿಂ ಯುವಕರಾದ ನದೀಮ್ ಮತ್ತು ಸಲ್ಮಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾರ್ಡ್ವಾರ್ನ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಈ ಕಾರ್ಮಿಕರ ವಿರುದ್ಧ ಕೇಸ್ ದಾಖಲಿಸಿರುವ ಬಗ್ಗೆ ಸ್ಟೇಷನ್ ಹೌಸ್ ಅಧಿಕಾರಿ ಕೆ.ಪಿ.ಸಿಂಗ್ ದೃಢಪಡಿಸಿದ್ದಾರೆ.
ಮುಜಫರ್ನಗರದ ಮನ್ಸೂರ್ಪುರದ ಕಾರ್ಖಾನೆಯ ಗುತ್ತಿಗೆದಾರ ಕೇಸ್ ನ ದೂರುದಾರರಾಗಿದ್ದು, ನದೀಮ್ ತನ್ನ ಜೊತೆ ಕೆಲಸ ಮಾಡುತ್ತಿದ್ದರು. ಬಳಿಕ ತನ್ನ ಪತ್ನಿ ಜೊತೆ ಆಪ್ತರಾಗಿ ಮತಾಂತರವಾಗಿ ವಿವಾಹವಾಗುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಾನು ಈ ವಿಚಾರ ಗಮನಕ್ಕೆ ಬಂದಾಗ ಮನೆಯನ್ನು ಬದಲಿಸಿದೆ. ಆದರೂ ಮತ್ತೆ ಮತ್ತೆ ಫೋನ್ ಮಾಡಿ ನನ್ನ ಪತ್ನಿಗೆ ಇಬ್ಬರು ಯುವಕರು ಮತಾಂತರವಾಗುವಂತೆ ಒತ್ತಡ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಲಹಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರ ಪೀಠ ವಿವಾಹಕ್ಕಾಗಿ ಮತಾಂತರ ನಿಷೇಧ ಎಂಬ ತೀರ್ಪನ್ನು ನೀಡಿದ ಬೆನ್ನಲ್ಲೇ ಬಿಜೆಪಿ ಆಡಳಿತದ ರಾಜ್ಯಗಳು ಲವ್ ಜಿಹಾದ್ ವಿರುದ್ಧದ ಕಾನೂನು ಜಾರಿಗೆ ತರಲು ಮುಂದಾಗಿದ್ದವು. ಈ ಬಗ್ಗೆ ದೇಶದಾದ್ಯಂತ ಚರ್ಚೆ ಬೆನ್ನಲ್ಲೇ ಅಲಹಬಾದ್ ಹೈಕೋರ್ಟ್ ಗೆ ತೀರ್ಪು ವೇಳೆ ಮಾಡಿದ ತಪ್ಪು ಅರಿವಾಗುತ್ತದೆ.
ವಿವಾಹಕ್ಕಾಗಿ ಮತಾಂತರ ನಿಷೇಧ ಆದೇಶ ಹಿಂಪಡೆದ ಅಲಹಬಾದ್ ಹೈಕೋರ್ಟ್ ವಿಶೇಷ ಪೀಠ ದೇಶದಲ್ಲಿನ ಚರ್ಚೆಗೆ ಪುಲ್ ಸ್ಟಾಪ್ ಹಾಕಿತ್ತು. ಇದರ ಬೆನ್ನಲ್ಲೇ ಯುಪಿಯಲ್ಲಿ ನೂತನ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲಾಗಿದೆ.
ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಅವರು ಮತಾಂತರ ನಿಷೇಧದ ಸುಗ್ರಿವಾಜ್ಞೆಗೆ ಅನುಮೋದನೆ ನೀಡಿದ ನಂತರ ಯುಪಿಯಲ್ಲಿ ದಾಖಲಾದ ಮೂರನೇ ಕೇಸ್ ಇದಾಗಿದೆ.
ಇದರ ಬೆನ್ನಲ್ಲೇ ಈ ಕೇಸ್ ಗಳನ್ನು ಗಮನಿಸಿದಾಗ ಮುಸ್ಲಿಂ ಯುವಕರ ಮೇಲೆ ದ್ವೇಷವನ್ನು ಸಾಧಿಸಲು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆ ಪ್ರಕಾರ ಬಲವಂತದ ಮತಾಂತರ, ವಿವಾಹಕ್ಕಾಗಿ ಮತಾಂತರ ನಿಷೇಧವಾಗಿದೆ. ಈ ಮೊದಲು ಪ್ರೀತಿಸಿ ವಿವಾಹವಾದ ಜೋಡಿ ಬಳಿಕ ಸಂಬಂಧ ಹದಗೆಟ್ಟಿದ್ದರೆ ಪ್ರಕರಣವನ್ನು ದಾಖಲಿಸಿ ಸೇಡು ತೀರಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನೊಂದು ಕಡೆಯಿಂದ ಯುವಕ-ಯುವತಿ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾದರೆ ಯುವತಿಯ ತಂದೆ ಹತಾಶೆಯಿಂದ ಕೇಸ್ ದಾಖಲು ಮಾಡುವ ಸಾಧ್ಯತೆ ಇದೆ.