ವಿಜಯಪುರ:(07/10/2020): ಪಡಿತರ ಅಕ್ಕಿ ಚೀಲ ತುಂಬಿಕೊಂಡಿದ್ದ ಅಕ್ಕಿ ಚೀಲ ತುಂಬಿದ್ದ ಲಾರಿಯನ್ನೇ ಅಪಹರಿಸಿದ ಘಟನೆ ನಡೆದಿದೆ.
ವಿಜಯಪುರ ರೈಲು ನಿಲ್ದಾಣದಿಂದ ಕೆಎಫ್ಸಿಎಸ್ಸಿ ಗೋದಾಮಿಗೆ ಪಡಿತರ ಅಕ್ಕಿ ಚೀಲ ತುಂಬಿಕೊಂಡು ಲಾರಿ ಹೊರಟಿತ್ತು.
ಕೆಎ 22 ಸಿ 0758 ಅಶೋಕ ಲೈಲ್ಯಾಂಡ್ ಲಾರಿಯಲ್ಲಿ 4.80 ಲಕ್ಷ ಮೌಲ್ಯದ 21.1 ಟನ್ ಪಡಿತರ ಅಕ್ಕಿ ಚೀಲವಿತ್ತು. ಲಾರಿಯನ್ನು ನಿಲ್ಲಿಸಿ ಚಾಲಕ ಮನೆಗೆ ಹೋಗಿದ್ದನು. ಹಿಂದಿರುಗಿ ಬರುವಾಗ ಲಾರಿ ಕಳುವಾಗಿತ್ತು.