ಬೆಳಗಾವಿ(06-02-2021): ಮರಾಠಿ ಮಾತನಾಡುವಂತೆ ಕನ್ನಡಿಗ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾತಾರಾ ಟೋಲ್ ಗೇಟ್ ಬಳಿ ನಡೆದಿದೆ.
ಘಟನೆ ಬಗ್ಗೆ ಸಂತ್ರಸ್ತ ಗೋವಿಂದ ಎನ್ನುವವರು ವಿಡಿಯೋ ಮಾಡಿ ವೈರಲ್ ಮಾಡಿದ್ದು, ವಿಡಿಯೋದಲ್ಲಿ ಸಹಾಯವನ್ನು ಯಾಚಿಸಿದ್ದಾರೆ.
ವಿಡಿಯೋದಲ್ಲಿ ಗೋವಿಂದ ಮಾತನಾಡಿ, ನನಗೆ ಮರಾಠಿ ಮಾತನಾಡುವಂತೆ ಒತ್ತಡ ಹಾಕಲಾಗಿದೆ, ಆದರೆ ನಾನು ಕನ್ನಡ ಮಾತನಾಡಿದೆ. ಅದಕ್ಕೆ ಅವರು ನನ್ನ ಬಟ್ಟೆಯನ್ನು ಹರಿದು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ಬಳಿಕ ಬೆಳಗಾವಿ ಪೊಲೀಸರು ಗೋವಿಂದು ಅವರನ್ನು ಕರೆಸಿ ವಿಚಾರಣೆಯನ್ನು ನಡೆಸಿದ್ದು ಈ ಕುರಿತ ತನಿಖೆ ನಡೆಯುತ್ತಿದೆ.