ಯಾವುದೇ ವಾರ್ಷಿಕ ವರದಿಯನ್ನು ಮಂಡಿಸದ ಲೋಕಪಾಲ್| ಭ್ರಷ್ಟಾಚಾರದ ವಿರುದ್ಧ ತನಿಖೆಗೆಂದು ಸ್ಥಾಪಿತ ಉನ್ನತ ಸಂಸ್ಥೆ ನಿಷ್ಕ್ರಿಯ?

parliment
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(04-02-2021): 2019 ರಲ್ಲಿ ಅಸ್ತಿತ್ವಕ್ಕೆ ಬಂದ ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಸಂಸ್ಥೆ, ರಾಷ್ಟ್ರಪತಿ ಮತ್ತು ಸಂಸತ್ತಿಗೆ, ಸಂಸ್ಥೆ ಮಾಡಿದ ಕಾರ್ಯಗಳ ಬಗ್ಗೆ ವಾರ್ಷಿಕ ವರದಿಯನ್ನು ಸಲ್ಲಿಸುವ ಅವಶ್ಯಕತೆಯಿದೆ ಆದರೆ ಉಭಯ ಸದನಗಳಲ್ಲಿ ಅಂತಹ ಯಾವುದೇ ವರದಿಯನ್ನು ಸಲ್ಲಿಕೆ ಮಾಡಿಲ್ಲ.

ರಾಜ್ಯಸಭೆಗೆ ಈ ಕುರಿತು ಗುರುವಾರ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ. ಮಾರ್ಚ್ 23, 2019 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಲೋಕಪಾಲ್ ಅಧ್ಯಕ್ಷರಾಗಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರಿಗೆ ಪ್ರಮಾಣ ವಚನ  ಭೋದಿಸಿದ್ದರು.

ಭ್ರಷ್ಟಾಚಾರದ ಆರೋಪಗಳನ್ನು ವಿಚಾರಿಸಲು ಮತ್ತು ತನಿಖೆ ನಡೆಸಲು ಉನ್ನತ ಸಂಸ್ಥೆಯಾಗಿ ಲೋಕಪಾಲ್ ರಚನೆಯನ್ನು ಮಾಡಲಾಗಿತ್ತು. ಲೋಕಪಾಲ್ ಎಂಬುದು ಲೋಕಾಯುಕ್ತ ಕಾಯ್ದೆ, 2013 ರ ಸೆಕ್ಷನ್ 3 ರ ಅಡಿಯಲ್ಲಿ ಸ್ಥಾಪಿಸಲಾದ ಸ್ವತಂತ್ರ ಶಾಸನಬದ್ಧ ಸಂಸ್ಥೆಯಾಗಿದೆ. ಈ ಕಾಯಿದೆಯ ಸೆಕ್ಷನ್ 48 ರ ಪ್ರಕಾರ, ಲೋಕಪಾಲ್ ವಾರ್ಷಿಕವಾಗಿ ರಾಷ್ಟ್ರಪತಿಗಳಿಗೆ ಅದು ಮಾಡಿದ ಕೆಲಸದ ಬಗ್ಗೆ ವರದಿಯನ್ನು ಸಲ್ಲಿಸುವ ಅಗತ್ಯವಿದೆ. ಸಂಸತ್ತಿನ ಉಭಯ ಸದನಗಳಲ್ಲಿ ವರದಿಯನ್ನು ಇಡಬೇಕಿದೆ. ಆದರೆ ಈವರೆಗೆ ಯಾವುದೇ ವರದಿಯನ್ನು ಲೋಕಪಾಲ್ ಸಂಸ್ಥೆ ಇಟ್ಟಿಲ್ಲ ಎಂದು ತಿಳಿದು ಬಂದಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು