ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ : ಇಂದು ಸಂಜೆ 5 ಗಂಟೆಗೆ ಯಡಿಯೂರಪ್ಪ ಸುದ್ದಿಗೋಷ್ಠಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಜೂನ್ 7 ಕ್ಕೆ ಅಂತ್ಯವಾಗಲಿದೆ, ಜೂನ್ 7ರ ನಂತರ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಬಹುತೇಕ ಸಚಿವರು, ತಜ್ಞರು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಪ್ರಕಟಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.

ಇಂದು ಸಂಜೆ 5 ಗಂಟೆಗೆ ಸಿಎಂ ಬಿಸಿ ಬಿ ಎಸ್ ವೈ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಜೂನ್ 7ರ ನಂತರ ಮತ್ತೆ 1 ವಾರ ಲಾಕ್ ಡೌನ್ ವಿಸ್ತರಣೆ ಘೋಷಣೆ ಮಾಡುವ ಸಾಧ್ಯತೆಯಿದೆ. ವಿಧಾನಸೌಧದಲ್ಲಿ ಸಿಎಂ ನಡೆಸಲಿರುವ ಸುದ್ದಿಗೋಷ್ಠಿಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ಈಗಾಗಲೇ ಬೇರೆ ರಾಜ್ಯಗಳಲ್ಲಿ ಲಾಕ್ಡೌನ್ ವಿಸ್ತರಣೆ ಆಗಿದೆ. ರಾಜ್ಯದಲ್ಲಿ ಕೊರೋನಾ ಕೇಸ್ ಪ್ರಕಾರಣ ಇಳಿಮುಖ ಕಂಡಿದ್ದರೂ ಸಾವಿನ ಪ್ರಮಾಣ ಇನ್ನು ಹತೋಟಿಗೆ ಬಂದಿಲ್ಲ. ಹಳ್ಳಿಗಳಲ್ಲಿ ಹೆಚ್ಚಿನ ಸೋಂಕು ಕಾಣಿಸುತ್ತಿದೆ, ಈಗ ಅನ್ ಲಾಕ್ ಮಾಡಿದರೆ ಪರಿಸ್ಥಿತಿ ಮತ್ತೆ ಕೈಮಿರಬಹುದು. ಹೀಗಾಗಿ ಕೊರೊನಾ ಕಂಟ್ರೋಲ್ ಗಾಗಿ ಜೂನ್ 7ರ ನಂತರ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಒಲವು ಹೆಚ್ಚಿದೆ.

ಇಷ್ಟೇ ಅಲ್ಲದೇ, ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉಳಿದ ವರ್ಗದವರಿಗೂ ಇಂದು ಸಂಜೆ ನಡೆಸಲಿರುವ ಸುದ್ದಿಗೋಷ್ಠಿಯಲ್ಲಿ 2ನೇ ವಿಶೇಷ ಆರ್ಥಿಕ ಪ್ಯಾಕೇಜ್ ಕೂಡ ಘೋಷಣೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಎಲ್ಲರ ಚಿತ್ತ ಸಂಜೆಯ ಸುದ್ದಿಗೋಷ್ಠಿಯತ್ತಲ್ಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು