ಲಾಕ್ಡೌನಿಗೆ ಸಾಧ್ಯತೆ | ಲಾಕ್ಡೌನ್ ಮಾಡುವುದಾದರೆ ಮಾಡಿ ಎಂದ ರಾಜ್ಯಪಾಲರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯಪಾಲರೇ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ರಾಜ್ಯಪಾಲ ವಜೂಭಾಯಿ ಲಾಕ್ಡೌನ್ ಮಾಡಲು ತನ್ನ ಅಭ್ಯಂತರವೇನೂ ಇಲ್ಲ ಎಂದಿದ್ದಾರೆ.

ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳಲು ಮುಖ್ಯಮಂತ್ರಿ ಸ್ವತಂತ್ರರಿದ್ದಾರೆ. ಲಾಕ್ಡೌನ್ ಬಗ್ಗೆ ಜನರಿಗೆ ಭಯ ಇದೆ. ಆದರೆ ಜನರು ಹಸಿವಿನಿಂದ ಸಾಯುವುದಿಲ್ಲ ಎಂಬ ವಿಶ್ವಾಸ ತನಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಲಾಕ್ಡೌನ್ ಮಾಡುವುದಾದರೆ ಮಾಡಿ ಎಂದು ಹೇಳುವ ಮೂಲಕ ತನ್ನ ಸಮ್ಮತಿ ಸೂಚಿಸಿದ್ದಾರೆ.  ಕೆಲವೇ ಸಮಯದಲ್ಲಿ ಸರಕಾರ ತನ್ನ ನಿರ್ಧಾರವನ್ನು ಪ್ರಕಟಿಸಲಿವೆ. ಲಾಕ್ಡೌನ್ ಇಲ್ಲವೇ ಇನ್ನಿತರ ಕಠಿಣ ಮಾರ್ಗಸೂಚಿಗಳು ಹೊರ ಬೀಳುವ ಸಾಧ್ಯತೆ ನಿಚ್ಛಳವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು