ಲಾಕ್ ಡೌನ್ ಅಸ್ತ್ರ ಬಳಕೆಗೆ ಅವಕಾಶ ಕೊಡಬೇಡಿ: ದೇಶದ ಜನತೆಗೆ ಪ್ರಧಾನಿ ಮೋದಿ ಮನವಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಅಸ್ತ್ರ ಬಳಕೆಗೆ ಅವಕಾಶ ಕೊಡಬೇಡಿ, ಮೈಕ್ರೋ ಕಂಟೇನ್ಮೇಂಟ್ ಝೋನ್ ಗಳಿಗೆ ಹೆಚ್ಚು ಆದ್ಯತೆ ಕೊಡಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರದಿಂದ ಇಡೀ ದೇಶವೇ ತತ್ತರಿಸಿದ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕೊರೊನಾ ವಿರುದ್ಧ ಹೋರಾಡಲು ದೇಶದ ಜನತೆ ಸಹಕರಿಸಿ, ದೇಶದಲ್ಲಿ ಲಾಕ್ ಡೌನ್ ದಿಂದ ಬಚಾವ್ ಆಗುವಂತೆ.ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ದೇಶದಲ್ಲಿ ಅಗತ್ಯ ಚಿಕಿತ್ಸೆ, ಆಮ್ಲಜನಕ ಕೊರತೆ ಆಗದಂತೆ ಸರಬರಾಜು ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಅಂತಿಮವಾಗಿ ದೇಶದ ಜನರ ಜೀವಗಳು ಉಳಿಸುವುದು ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ರಾಜ್ಯಗಳಲ್ಲಿ ಲಾಕ್ ಡೌನ್ ಹೇರುವುದು ಬೇಡ ಎಂದು ಮೋದಿ ಸಲಹೆ ನೀಡಿದ್ದಾರೆ.

ಲಾಕ್ ಡೌನ್ ಅಂತಿಮ ಅಸ್ತ್ರವಾಗಿ ಬಳಸಬೇಕು, ಹೊರತು ಯಾವುದೇ ಕಾರಣಕ್ಕೂ ಲಾಕ್ ಡೌನ್ ಹೇರಬಾರದು ಎಂದು ರಾಜ್ಯಗಳಿಗೆ ಪ್ರಧಾನಿಗಳು ಸಲಹೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು