ಮಂಗಳೂರು: ಎಲ್ ಐ ಸಿ ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ವಿಮಾ – ಬ್ಯಾಂಕ್ ನೌಕರರ ಹಾಗೂ ಜನಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ವಿಮಾ – ಬ್ಯಾಂಕ್ ನೌಕರರು,ವಿಮಾ ಪ್ರತಿನಿಧಿಗಳು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಸೇರಿದಂತೆ 300ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ವಿಮಾ ನೌಕರರ ಸಂಘದ ನಾಯಕರಾದ ಡೆರಿಕ್ ಲೋಬೋ,ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಂ.ಮಾಧವ,ಕಾರ್ಮಿಕ ನಾಯಕರಾದ ಬಿ.ಶೇಖರ್, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ನಾಯಕರಾದ ರಾಘವ,ವಿಮಾ ಪ್ರತಿನಿಧಿಗಳ ಸಂಘಟನೆಯ ಮುಖಂಡರಾದ ರಮೇಶ್ ಕುಮಾರ್,ಕಾಂಗ್ರೆಸ್ ಕಾರ್ಮಿಕ ವಿಭಾಗದ ನಾಯಕರಾದ ಲಾರೆನ್ಸ್ ಡಿಸೋಜರವರು ಮಾತನಾಡಿದರು.
ಪ್ರತಿಭಟನೆಯ ನೇತ್ರತ್ವವನ್ನು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ವಿಮಾ ನೌಕರರ ಮುಖಂಡರಾದ ವಿಶ್ವನಾಥ,ಪ್ರಭಾಕರ್ ಕುಂದರ್,ಬಿ.ಎನ್ ದೇವಾಡಿಗ,ರಾಘವೇಂದ್ರ ರಾವ್,ಆಲ್ವಿನ್ ಮಸ್ಕರೇನಸ್, ವಸಂತ ಕುಮಾರ್, ರಾಧಿಕಾ ಕಾಮತ್, ಬ್ಯಾಂಕ್ ನೌಕರರ ಮುಖಂಡರಾದ ಪುರುಷೋತ್ತಮ,ಸುನಿಲ್ ರಾಜ್,ಕಾರ್ಮಿಕ ನಾಯಕರಾದ ರಾಮಣ್ಣ ವಿಟ್ಲ,ರವಿಚಂದ್ರ ಕೊಂಚಾಡಿ, ಎಚ್.ವಿ.ರಾವ್, ವಿ.ಕುಕ್ಯಾನ್, ಕರುಣಾಕರ್, ಸುರೇಶ್ ಕುಮಾರ್,Dyfi ನಾಯಕರಾದ ಸಂತೋಷ್ ಬಜಾಲ್,ನವೀನ್ ಕೊಂಚಾಡಿ,JDS ಮಹಿಳಾ ಜಿಲ್ಲಾಧ್ಯಕ್ಷೆಯಾದ ಸುಮತಿ ಎಸ್ ಹೆಗ್ಡೆ,ಹರ್ಷಿತಾ,ಕವಿತಾ,ದಲಿತ ಮುಖಂಡರಾದ ಎಂ.ದೇವದಾಸ್, ಸಮುದಾಯದ ವಾಸುದೇವ ಉಚ್ಚಿಲ್,ಸಾಮಾಜಿಕ ಹೋರಾಟಗಾರರಾದ ಸುರೇಶ್ ಶೆಟ್ಟಿ, ಜೆರಾಲ್ಡ್ ಟವರ್, ಸಾಮಾಜಿಕ ಚಿಂತಕರಾದ ಅಶುಂತ ಡಿಸೋಜ, ಪ್ರಮೀಳಾ ದೇವಾಡಿಗ ಮುಂತಾದವರು ವಹಿಸಿದ್ದರು.