ಬಿಗ್ ನ್ಯೂಸ್| ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಅಡ್ಡಿ!

cow
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(11-12-2020): ಬಿಜೆಪಿ ಸರ್ಕಾರವು ವಿಧಾನ ಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸುವುದನ್ನು ಮುಂದೂಡಿದ ನಂತರ ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸುವ ಕಾನೂನು ಮುಂದಿನ ಶಾಸಕಾಂಗ ಅಧಿವೇಶನದವರೆಗೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತವಿಲ್ಲ, ಇದರಿಂದಾಗಿ ಬಿಲ್ ನ್ನು ಮುಂದೂಡಲಾಗಿದೆ. ಬುಧವಾರ ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆ ವಿರೋಧಿ ಮಸೂದೆಯನ್ನು ಅಂಗೀಕರಿಸಲಾಯಿತು.

ಕರ್ನಾಟಕ ವಧೆ ಮತ್ತು ದನಗಳ ಸಂರಕ್ಷಣೆ ಮಸೂದೆ -2020 ಎಂದು ಕರೆಯಲ್ಪಡುವ ಮಸೂದೆಯು ರಾಜ್ಯದಲ್ಲಿ ಹಸುಗಳ ಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಮತ್ತು ಕಳ್ಳಸಾಗಣೆ, ಅಕ್ರಮ ಸಾಗಣೆ, ಹಸುಗಳ ಮೇಲಿನ ದೌರ್ಜನ್ಯ ಮತ್ತು ವಧೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.  ಆದರೆ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತವಿಲ್ಲದ ಕಾರಣ ಬಿಲ್ ಮುಂದಿನ ಅಧಿವೇಶನದವರೆಗೂ ಬಾಕಿಯಾಗಿ ಉಳಿಯುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು