ಮೋದಿಯವರೇ ಬಜೆಟ್ ನಲ್ಲಿ ಲಸಿಕೆಗಾಗಿ ಮೀಸಲಿಟ್ಟ 35000 ಕೋಟಿ ಹಣ ಏನಾಯ್ತು? : ಸಂಸದ ಪ್ರಜ್ವಲ್ ರೇವಣ್ಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹಾಸನ: ನರೇಂದ್ರ ಮೋದಿಯವರು ಬಜೆಟ್ ನಲ್ಲಿ ಲಸಿಕೆಗಾಗಿ ಮೀಸಲಿಟ್ಟ 35000 ಕೋಟಿ ಮೀಸಲಿಟ್ಟಿದ್ದೇನೆ ಎಂದಿದ್ದರು, ಅದು ಹಣ ಏನಾಯ್ತು? ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಅವರು ಕೇಂದ್ರ‌ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಕ್ಕೆ ಅಗತ್ಯ ಪ್ರಮಾಣದ ಲಸಿಕೆ ದೊರಕುತ್ತಿಲ್ಲ. ಆಕ್ಸಿಜನ್ ನೀಡಿ ಎಂದು ಹೈಕೋರ್ಟ್ ಗೆ ಕೇಳಿದರೆ ಅದರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. ನಮ್ಮ ಪಾಲಿನ GST ಹಣ ಕೂಡ ನೀಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲೂ ಇವರದ್ದೇ ಸರ್ಕಾರ ಇದ್ದರೂ ಕೂಡ ಕನ್ನಡಿಗರಿಗೆ ಆಗುತ್ತಿರುವ ಮಲತಾಯಿ ಧೋರಣೆ ಮಾತ್ರ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಗುಡುಗಿದ್ದಾರೆ.

ರಾಜ್ಯದಲ್ಲಿ ಇದ್ದ ಮೈತ್ರಿ ಸರ್ಕಾರವನ್ನು ತೆಗೆದು ತಮ್ಮ ಸರ್ಕಾರ ಸ್ಥಾಪಿಸಿ ಎಲ್ಲವೂ ಉದ್ಧಾರ ಮಾಡುತ್ತೇವೆ ಎಂದ ಕೇಂದ್ರದವರು ರಾಜ್ಯಕ್ಕೆ ತಾರತಮ್ಯ ಎಸಗಿದ್ದಾರೆ.
ರಾಜ್ಯದ ಜನ ನಿಮಗೆ 25 ಸಂಸದರನ್ನ ನೀಡಿದ್ದೆ ತಪ್ಪಾ? ಎಂದು ಜನರೇ ಪ್ರಶ್ನಿಸಬೇಕಾಗಿದೆ. ಬೆಡ್ , ಆಕ್ಸಿಜನ್ ಇಲ್ಲದೆ ಎಷ್ಟೋ ಸೋಂಕಿತರು ಮನೆಯಲ್ಲಿಯೇ ಸಾವನ್ನಪ್ಪುತ್ತಿದ್ದಾರೆ, ಕೊರೊನಾ ಸೋಂಕಿತರ ಬಾಡಿಗಳನ್ನು ಅಂತ್ಯಸಂಸ್ಕಾರ ಮಾಡಿಸಲು ಸ್ಮಶಾನದ ಮುಂದೆ ಒಂದು ಕಿ.ಮೀ. ಸಾಲುಗಟ್ಟಿ ನಿಲ್ಲಬೇಕಾದ ದುರಂತ ಪರಿಸ್ಥಿತಿ ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿ. ರಾಜ್ಯದ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ಎಂದು ಪ್ರಜ್ವಲ್ ಕೇಳಿದ್ದಾರೆ.

ಹತ್ತು ಸಾವಿರ ಬೆಡ್ ಕೊಡ್ತಿವಿ ಎಂದಿದರು ಅವು ಎಲ್ಲಿ, ವಿಶೇಷ ಆರ್ಥಿಕ ಪ್ಯಾಕೇಜ್ ಬಂದಿಲ್ಲ,
ರಾಜ್ಯಕ್ಕೆ GST ಹಣ ಕೂಡ ಕೊಡಲ್ಲ, ಚಿಕಿತ್ಸೆಗೆ ಬೇಕಾದ ನೆರವು ನೀಡಲ್ಲ? ಇಡೀ ದೇಶದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರ ರಾಜ್ಯವಾಗಿದೆ ನಮ್ಮ. ಕರ್ನಾಟಕ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೆ ಕಾರಣ. ಇಂಥ ಸರ್ಕಾರಗಳಿಗೆ ಮತ್ತೊಮ್ಮೆ ಅಧಿಕಾರ ನೀಡಬೇಡಿ ಎಂದು ಪ್ರಜ್ವಲ್ ರೇವಣ್ಣ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು