ಲಕ್ಷದ್ವೀಪ ನಿವಾಸಿಗಳಿಗಿನ್ನು ಸಂಕಷ್ಟದ ದಿನಗಳು….! ಡಯರಿ ಫಾರ್ಮುಗಳ ಮುಚ್ಚುಗಡೆ; ಪರ್ಯಾಯವಾಗಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಸಿದ್ಧತೆ; ವ್ಯಾಪಕ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕವರಟ್ಟಿ: ಲಕ್ಷದ್ವೀಪದ ಆರ್ಥಿಕತೆಯ ಬೆನ್ನುಮೂಳೆಯನ್ನು ಮುರಿದು, ಪರಾವಲಂಬಿಯಾಗಿಸುವ ಪ್ರಯತ್ನವು ನಡೆಯುತ್ತಿದೆಯೆಂಬ ಆತಂಕ ಲಕ್ಷದ್ವೀಪ ನಿವಾಸಿಗಳನ್ನು ಕಾಡುತ್ತಿದೆ. ಇದರ ವಿರುದ್ಧವಾಗಿ ಅಲ್ಲಿನ ನಿವಾಸಿಗಳು ಪ್ರತಿಭಟಿಸಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.

ತಿಂಗಳ ಇಪ್ಪತ್ತೊಂದನೆಯ ದಿನಾಂಕದಂದು ಲಕ್ಷದ್ವೀಪದ ಎಲ್ಲಾ ಡೈರಿ ಫಾರ್ಮುಗಳನ್ನು ಮುಚ್ಚಬೇಕೆಂಬ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿಅಮುಲ್ ಉತ್ಪನ್ನಗಳನ್ನು ಅಲ್ಲಿಗೆ ಸಾಗಿಸುವ ಪ್ರಯತ್ನ ನಡೆಯುತ್ತಿದೆಯೆನ್ನಲಾಗಿದೆ.

ಸರಕಾರದ ನಿರ್ಧಾರದ ಕುರಿತು ಅಲ್ಲಿನ ನಿವಾಸಿಗಳು ಚಿಂತಿತರಾಗಿದ್ದು, ಪ್ರತಿಭಟಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ತಿಂಗಳ ಇಪ್ಪತ್ತನಾಲ್ಕರಂದುಅರೇಬಿಯನ್ ಸೀಹಡಗಿನ ಮೂಲಕ ಅಮಲ್ ಡೈರಿ ಉತ್ಪನ್ನಗಳು ಕವರಟ್ಟಿಗೆ ತಲುಪಲಿದೆ. ಉತ್ಪನ್ನಗಳನ್ನು ಬಹಿಷ್ಕರಿಸಲು ಲಕ್ಷದ್ವೀಪ ನಿವಾಸಿಗಳು ಮುಂದಾಗಿದ್ದಾರೆ. ಅಮುಲ್ ಕಂಪೆನಿಯುಯುಪಿಎಸ್ಸಿ ಜಿಹಾದ್ಎಂಬ ವಿವಾದಿತ ಟಿವಿ ಕಾರ್ಯಕ್ರಮದ ಪ್ರಾಯೋಜಕರು ಎನ್ನುವುದು ಕೂಡಾ ಇಲ್ಲಿ ಗಮನಾರ್ಹ ವಿಚಾರ. ಹಾಗೆಯೇ ಅದು ಗುಜರಾತ್ ಕಾಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನಿನ ಅಧೀನ ಸಂಸ್ಥೆಯೂ ಆಗಿದೆ.

ಜೊತೆಗೆ ಲಕ್ಷದ್ವೀಪದಲ್ಲಿ ಗೋಹತ್ಯೆ ನಿಷೇಧ, ಮದ್ಯ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡುವುದು, ಸ್ಥಳೀಯರ ಮೀನುಗಾರಿಕೆಯ ಮೇಲೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸುವುದು, ಆಡಳಿತಾತ್ಮಕ ಸೇವೆಗಳಿಂದ ಸ್ಥಳೀಯರನ್ನು ದೂರವಿಡುವುದು ಇತ್ಯಾದಿಗಳನ್ನು ಕೂಡಾ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆಯೆಂಬ ಆರೋಪವೂ ಕೇಳಿ ಬರುತ್ತಿದೆ. ತೊಂಬತ್ತೊಂಭತ್ತು ಶೇಕಡಾ ಮುಸ್ಲಿಮರಿರುವ ಲಕ್ಷದ್ವೀಪದಲ್ಲಿ ಮೀನುಗಾರಿಕೆ, ಪಶು ಸಂಗೋಪನೆ ಇತ್ಯಾದಿಗಳು ಪ್ರಮುಖ ಆರ್ಥಿಕ ಮೂಲವಾಗಿದೆ.

ಹಾಲಿ ಅಡ್ಮಿನಿಸ್ಟ್ರೇಟರ್, ಬಿಜೆಪಿ ಮುಖಂಡ ಪ್ರಫುಲ್ ಪಾಟೇಲ್

ಹಿಂದಿನ ಅಡ್ಮಿನಿಸ್ಟ್ರೇಟರ್, ದಿನೇಶ್ ಶರ್ಮಾ ಕಳೆದ ವರ್ಷ ಡಿಸೆಂಬರ್ ನಾಲ್ಕರಂದು ನಿಧನರಾಗಿದ್ದರು. ಅವರ‍ ಸ್ಥಾನಕ್ಕೆ ಬಿಜೆಪಿ ನಾಯಕ ಪ್ರಫುಲ್ ಪಾಟೇಲ್ ಅವರನ್ನು ನೇಮಿಸಲಾಗಿತ್ತು. ಪ್ರಫುಲ್ ಪಾಟೇಲ್ ಲಕ್ಷದ್ವೀಪದಲ್ಲಿ ತನ್ನ ರಾಜಕೀಯ ಅಜೆಂಡಾವನ್ನು ಹೇರಲು ಶ್ರಮಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲಿನ ವಿಚಾರಗಳು ಹೊರ ಪ್ರಪಂಚ ತಿಳಿಯದಂತೆ ಮಾಡಲು ಸುದ್ಧಿ ಮೂಲಗಳ ಮೇಲಿನ ನಿರ್ಬಂಧ, ಇಂಟರ್ನೆಟ್ ನಿಷೇಧದಂತಹಾ ನಡೆಗಳು ಜಾರಿ ಮಾಡುವ ಪ್ರಯತ್ನವೂ ಸಾಗುತ್ತಿವೆಯೆಂದು ವರದಿಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು