ಲಕ್ಷದ್ವೀಪ ನಿವಾಸಿಗಳಿಗೆ ಇನ್ನಷ್ಟು ಬೆಂಬಲ | ಐದು ಮಂದಿ ಮಾಜಿ ಅಡ್ಮಿನಿಸ್ಟ್ರೇಟರುಗಳಿಂದ ರಾಷ್ಟ್ರಪತಿಗೆ ಪತ್ರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕವರತ್ತಿ: ಲಕ್ಷದ್ವೀಪದ ಹಾಲಿ ಅಡ್ಮಿನಿಸ್ಟ್ರೇಟರಿನ ಜನ ವಿರೋಧೀ ನಡೆಯ ವಿರುದ್ಧ ಮಾಜಿ ಅಡ್ಮಿನಿಸ್ಟ್ರೇಟುಗಳು ಧ್ವನಿಯೆತ್ತಿದ್ದಾರೆ. ಐದು ಮಂದಿ ಮಾಜಿ ಅಡ್ಮಿನಿಸ್ಟ್ರೇಟರುಗಳು ಲಕ್ಷದ್ವೀಪದ ಜನರನ್ನು ಬೆಂಬಲಿಸಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಮೊದಲಿಗೆ ಮಾಜಿ ಅಡ್ಮಿನಿಸ್ಟ್ರೇಟರ್ ಸೈಗಾಲ್, ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದು, ಲಕ್ಷದ್ವೀಪದಲ್ಲಿ ಹೊಸತಾಗಿ ಜಾರಿಗೆ ತಂದಿರುವ ಕಾನೂನುಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದ್ದರು. ಅವರ ಬೆನ್ನಿಗೆ ಇನ್ನಷ್ಟು ಮಾಜಿ ಅಡ್ಮಿನಿಸ್ಟ್ರೇಟರುಗಳು ಮುಂದೆ ಬಂದು, ಹಾಲಿ ಅಡ್ಮಿನಿಸ್ಟ್ರೇಟರ್ ಕಳೆದ ಐದು ತಿಂಗಳಿನಿಂದ ಜಾರಿಗೆ ತರುತ್ತಿರುವ ಕಾನೂನುಗಳ ವಿರುದ್ಧ ಮಾತನಾಡಿದ್ದಾರೆ.

ಜಗದೀಶ್ ಸಾಗರ್, ರಾಜೀವ್ ತಲ್ವಾರ್, ಆರ್ ಚಂದ್ರ ಮೋಹನ್, ವಜಹತ್ ಹಬೀಬುಲ್ಲಾಹ್, ಆರ್. ಸುಂದರ್ ರಾಜ್ ಎಂಬವರೇ ರಾಷ್ಟಪತಿಗೆ ಪತ್ರ ಬರೆದ ಮಾಜಿ ಅಡ್ಮಿನಿಸ್ಟ್ರೇಟರುಗಳು.

ಲಕ್ಷದ್ವೀಪದ ಜನರಿಗೆ ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಬೆಂಬಲ ವ್ಯಕ್ತವಾಗುತ್ತಿದ್ದು, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ಸಿನ ಪ್ರಮುಖ ನಾಯಕಿ ಮಹುವಾ ಮೋಯಿತ್ರ ಕೂಡಾ ಲಕ್ಷ ದ್ವೀಪದ ನೂತನ ಕಾನೂನುಗಳನ್ನು ಆಕ್ಷೇಪಿಸಿದ್ದಾರೆ.

ರಾಹುಲ್ ಗಾಂಧಿ, ವಿವಿಧ ಸೆಲೆಬ್ರೆಟಿಗಳು, ಸಿಪಿಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸ್ವತಃ ಬಿಜೆಪಿಯ ಲಕ್ಷದ್ವೀಪ ಘಟಕ ಹೀಗೆ ಹಲವಾರು ಕಡೆಯಿಂದ ಬೆಂಬಲ ಸಿಕ್ಕಿದೆ. ಇನ್ನೊಂದು ಕಡೆಯಿಂದ ಲಕ್ಷದ್ವೀಪದ ರಾಜಕೀಯ ಅಸ್ಥಿರತೆಯ ಬಗ್ಗೆ ಹಲವು ಅಂತರಾಷ್ಟ್ರೀಯ ಮಾಧ್ಯಮಗಳೂ ಗಮನ ಹರಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು