ಪುಟ್ಟ ದ್ವೀಪ ಸಮೂಹದ ಬೆನ್ನ ಹಿಂದೆ ಬಿದ್ದ ಸರಕಾರ | ‘ಲಕ್ಷದ್ವೀಪ’ದ ಒಂದೊಂದು ದ್ವೀಪಕ್ಕೂ ಒಬ್ಬೊಬ್ಬ ಐಎಎಸ್/ಐಪಿಎಸ್ ಅಧಿಕಾರಿ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕವರತ್ತಿ: ಪುಟ್ಟ ದ್ವೀಪ ಸಮೂಹದ ಬೆನ್ನ ಹಿಂದೆ ಬಿದ್ದಿರುವ ಸರಕಾರ, ತನ್ನ ಕಾರ್ಯಯೋಜನೆಗಳಿಗೆ ಲಕ್ಚದ್ವೀಪದ ನಿವಾಸಿಗಳನ್ನು ಒಗ್ಗಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ.

ಲಕ್ಷದ್ವೀಪದ ಪ್ರತಿಯೊಂದು ಪುಟ್ಟ ಪುಟ್ಟ ದ್ವೀಪಗಳಿಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿಕೊಂಡಿದೆ. ಈ ಅಧಿಕಾರಿಗಳು ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗಿದ್ದು, ಆಯಾ ದ್ವೀಪದ ಜವಾಬ್ಧಾರಿಯನ್ನು ಹೊರಬೇಕಿದೆಇಂತಹ ಅಧಿಕಾರಿಗಳನ್ನು ನೇಮಕ ಮಾಡಿರುವುದು ಲಕ್ಷದ್ವೀಪದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.

ಗ್ರಾಮ ಮಟ್ಟದಲ್ಲಿ ಜನರ ಮನಸ್ಸನ್ನು ಪರಿವರ್ತಿಸುವ ಕೆಲಸಗಳಲ್ಲಿ ಇವರು ನಿರತರಾಗುತ್ತಾರೆ. ನೂತನ ಅಡ್ಮಿನಿಸ್ಟ್ರೇಟರ್ ಜಾರಿಗೆ ತಂದಿರುವ ಕಾನೂನುಗಳು ದ್ವೀಪದ ಜನರ ಪಾಲಿಗೆ ಎಷ್ಟು ಲಾಭದಾಯಕ ಎನ್ನುವುದನ್ನು ವಿವರಿಸಿ ಕೊಡಲಿದ್ದಾರೆ.

ಲಕ್ಷದ್ವೀಪದ ಅಭಿವೃದ್ಧಿ ಚಟುವಟಿಕೆಗಳು ಮತ್ತು ಕೋವಿಡ್ ಸ್ಥಿತಿಗತಿಯ ಬಗೆಗೆ ನಿಗಾಯಿರಿಸಿಕೊಳ್ಳುವ ಸಲುವಾಗಿ ಈ ಉನ್ನತ ಅಧಿಕಾರಿಗಳನ್ನು ನೇಮಿಸಲಾಗಿದೆಯೆಂದು ಸರಕಾರೀ ಪ್ರಕಟಣೆಗಳು ತಿಳಿಸಿವೆ. ಜೊತೆಗೆ  ದ್ವೀಪಗಳ ವಿಪತ್ತು ಪರಿಹಾರ ಕಾರ್ಯ, ಶುಚಿತ್ವ ಇತ್ಯಾದಿ ವಿಷಯಗಳನ್ನೂ ನೋಡಿಕೊಳ್ಳಬೇಕಿದೆ. ಅಧಿಕಾರಿಗಳು ತಮಗೆ ಜವಾಬ್ದಾರಿ ವಹಿಸಲಾದ ದ್ವೀಪಗಳಲ್ಲಿ ತಂಗಬೇಕಿದ್ದು, ಅಲ್ಲಿನ ಪಂಚಾಯತ್ ಸದಸ್ಯರಂತಹಾ ತಳ ಮಟ್ಟದ ಪ್ರಮುಖರ ಜೊತೆಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳಬೇಕಿದೆ.

ಅಡ್ಮಿನಿಸ್ಟ್ರೇಟರ್ ಜಾರಿಗೆ ತಂದ ಜನ ವಿರೋಧೀ ಕಾನೂನುಗಳನ್ನು ಬಹಿಷ್ಕರಿಸಿ, ವಿವಿಧ ದ್ವೀಪಗಳಲ್ಲಿರುವ ಜನರು ಈಗಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಓನ್ಲೈನ್ ಅಭಿಯಾನಗಳೂ ಸಕ್ರಿಯವಾಗಿದೆ. ಇತ್ತೀಚೆಗಷ್ಟೇ ಲಕ್ಷದ್ವೀಪದ ಜನರ ಪ್ರತಿಭಟನೆ ಬೆಂಬಲಿಸಿ ಮತ್ತು ಅಲ್ಲಿನ ಅಡ್ಮಿನಿಸ್ಟ್ರೇಟರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೋರಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು