ಲಕ್ಷದ್ವೀಪ: ಅಡ್ಮಿನಿಸ್ಟ್ರೇಟರ್ ನಂಬರಿಗೆ ‘ಹಾಯ್’ ಎಂಬ ವಾಟ್ಸಪ್ ಮೆಸೇಜ್ ಕಳಿಸಿದ್ದಕ್ಕೆ ಮೂರು ಮಕ್ಕಳು ಸೇರಿ ನಾಲ್ವರು ಸೆರೆಮನೆಗೆ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕವರಟ್ಟಿ: ಕ್ಷುಲ್ಲಕ ಕಾರಣಕ್ಕೆ ಲಕ್ಷದ್ವೀಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಅದರಲ್ಲಿ ಮೂವರು ಮಕ್ಕಳು ಎನ್ನುವ ಆತಂಕಕಾರಿ ವಿಚಾರವು ಬೆಳಕಿಗೆ ಬಂದಿದೆ.

ಬಿತ್ರ ಎಂಬ ದ್ವೀಪದಿಂದ ಓರ್ವನನ್ನು, ಅಗತಿ ಎಂಬ ಹೆಸರಿನ ದ್ವೀಪದಿಂದ ಮೂವರು ಮಕ್ಕಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಡ್ಮಿನಿಸ್ಟ್ರೇಟರಿನ ವಾಟ್ಸಪ್ ನಂಬರಿಗೆಹಾಯ್ಎಂಬ ಸಂದೇಶ ಕಳಿಸಿರುವುದೇ ಶಫೀಖ್ ಎಂಬವನ ಬಂಧನಕ್ಕೆ ಕಾರಣವೆಂದು ವರದಿಯಾಗಿದೆ. ಬಂಧಿತರೆಲ್ಲರೂ ಈಗ ಕವರಟ್ಟಿ ಪೋಲೀಸರ ವಶದಲ್ಲಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬಿಜೆಪಿ ನಾಯಕ ಪ್ರಫುಲ್ ಪಾಟೇಲ್ ಲಕ್ಷದ್ವೀಪದ ಅಡ್ಮಿನಿಸ್ಟ್ರೇಟರ್ ಆಗಿ ನೇಮಕಗೊಂಡಿದ್ದರು. ಬಳಿಕ ಅಲ್ಲಿನ ಕಾನೂನುಗಳನ್ನು ತನ್ನ ಮೂಗಿನ ನೇರಕ್ಕೆ ಬದಲಾಯಿಸುತ್ತಿದ್ದಾರೆಂದು ದ್ವೀಪದ ನಿವಾಸಿಗಳು ಅಸಮಾಧಾನಗೊಂಡಿದ್ದಾರೆ. ಗೋಹತ್ಯೆ ನಿಷೇಧ, ಮದ್ಯ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡುವುದು, ಸ್ಥಳೀಯರ ಮೀನುಗಾರಿಕೆ ಮತ್ತು ಹೈನುಗಾರಿಕೆಯ ಮೇಲೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸುವುದು, ಆಡಳಿತಾತ್ಮಕ ಸೇವೆಗಳಿಂದ ಸ್ಥಳೀಯರನ್ನು ದೂರವಿಡುವುದು ಇತ್ಯಾದಿಗಳನ್ನು ಕೂಡಾ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆಯೆಂಬ ಆರೋಪವೂ ಕೇಳಿ ಬರುತ್ತಿದೆ.

ಅಪರಾಧ ಚಟುವಟಿಕೆಗಳು ತೀರಾ ಕಡಿಮೆ ಪ್ರಮಾಣದಲ್ಲಿರುವ ಲಕ್ಷದ್ವೀಪದಲ್ಲಿ ಗೂಂಡಾ ಕಾಯ್ದೆಯನ್ನು ಜಾರಿ ಮಾಡಲಾಗಿದ್ದು, ಇದು ಜನರನ್ನು ಬೆದರಿಸಿ ಬಾಯಿ ಮುಚ್ಚಿಸುವ ತಂತ್ರವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನಡುವೆ ಮೂವರು ಮಕ್ಕಳು ಸೇರಿ ನಾಲ್ವರ ಬಂಧನವಾಗಿದೆ. ಅಡ್ಮಿನಿಸ್ಟ್ರೇಟರ್ ಪ್ರಫುಲ್ ಪಾಟೇಲ್ ನಡೆಗೆ ದ್ವೀಪದ ಒಳಗೂ, ಹೊರಗೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು