ಲಖಿಂಪುರ ಖೇರಿ ಹಿಂಸಾಚಾರ: ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ, ಮತ್ತಿಬ್ಬರ ಬಂಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ: ಲಖಿಂಪುರ ಖೇರಿ ರೈತರ ಹತ್ಯೆಕಾಂಡ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿ ಆದೇಶಿಸಿದೆ.

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ ಪರಿಣಾಮ ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತನ ಕೊಲೆಗೈದ ಆರೋಪದ ಪ್ರಮುಖ ಆರೋಪಿಗಳಾಗಿರುವ ಆಶಿಶ್‌ ಮಿಶ್ರಾ ಮತ್ತು ಆಶಿಶ್‌ ಪಾಂಡೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾ.ಚಿಂತಾ ರಾಮ್‌ ತಿರಸ್ಕರಿಸಿದ್ದಾರೆ ಎಂದು ಹಿರಿಯ ಅಧಿಕಾರಿ ಎಸ್‌ಪಿ ಯಾದವ್‌ ಮಾಹಿತಿ ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಇಬ್ಬರು ಆರೋಪಿಗಳಿಗೆ ಎಸ್‌ಐಟಿ (SIT)ತಂಡ ಬಂಧಿಸಿದೆ. (38)ವರ್ಷದ ಅಂಕಿತ್‌ ದಾಸ್‌ ಮತ್ತು (37) ವರ್ಷದ ಲತೀಫ್‌ ಅಲಿಯಾಸ್ ಕಾಳಾ ಅವರು ಬಂಧನಕ್ಕೆ ಒಳಗಾಗಿದ್ದಾರೆ.

ಅಕ್ಟೋಬರ್‌ 9ರಂದು ಆಶಿಶ್‌ ಮಿಶ್ರಾ ಅವರನ್ನು ಬಂಧಿಸಿದ ವಿಶೇಷ ತನಿಖಾ ದಳ ಆಶಿಶ್‌ ಮಿಶ್ರಾ ಅವರನ್ನು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ 3 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದರು.

ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಆಶಿಶ್‌ ಮಿಶ್ರಾ, ಲವಕುಶ, ಆಶಿಶ್‌ ಪಾಂಡೆ, ಭಾರ್ತಿ, ಅಂಕಿತ್‌ ದಾಸ್‌ ಮತ್ತು ಕಾಲ ಬಂಧಿತ ಆರೋಪಿಗಳು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು