ಲಖಿಂಪುರ ಹಿಂಸಾಚಾರ : ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನ !

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಶೇಷ ತನಿಖಾ (ಎಸ್ ಐಟಿ) ತಂಡ ಶನಿವಾರ ತಡರಾತ್ರಿ ಬಂಧಿಸಿದೆ.

ಲಖಿಂಪುರ ಖೇರಿ ಘಟನೆಯಲ್ಲಿ ತಮ್ಮ ಪಾತ್ರ​ವಿಲ್ಲ ಎಂದು ಕೆಲ​ವು ದಾಖ​ಲೆ​ಗಳೊಂದಿಗೆ ಅವರು 12 ತಾಸಿನ ವಿಚಾ​ರಣೆ ವೇಳೆ ಸ್ಪಷ್ಟನೆ ನೀಡಲು ಯತ್ನಿ​ಸಿ​ದ​ರು. ಆದರೆ ಪೊಲೀ​ಸರ ಕೇಳಿದ ಕೆಲವು ಪ್ರಶ್ನೆಗಳಿಗೆ​ಗೆ ಉತ್ತರ ನೀಡಲು ವಿಫ​ಲರಾಗಿ ಅಸ​ಹ​ಕಾರ ತೋರಿದ​ರು.  ಹೀಗಾಗಿ ಅವರನ್ನು ಬಂಧಿ​ಸ​ಲಾ​ಯಿತು. ಅವ​ರನ್ನು ಕೋರ್ಟ್‌ಗೆ ಹಾಜ​ರು​ಪ​ಡಿ​ಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ವಿಚಾ​ರಣೆ ನಡೆ​ಸು​ತ್ತೇ​ವೆ ಎಂದು ಡಿಐಜಿ ಉಪೇಂದ್ರ ಅಗರವಾಲ್ ತಿಳಿಸಿದ್ದಾರೆ.

ಲಖಿಂಪುರ ಖೇರಿಯಲ್ಲಿ ರಸ್ತೆ ಮೇಲೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿದಂತೆ 8 ಜನರ ಸಾವಿಗೆ ಕಾರಣವಾದ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕು ಎಂದು ರೈತ ಸಂಘಟನೆಗಳು ಯುಪಿ ಸರ್ಕಾರವನ್ನು ಒತ್ತಾಯಿಸಿದವು.

ಕೃತ್ಯ ನಡೆದ 6 ದಿನಗಳ ಬಳಿಕ ಆಶಿಶ್‌ ಮಿಶ್ರಾ ಅವರನ್ನು ಬಂಧಿಸಲಾಗಿದೆ. ಅಕ್ಟೋಬರ್‌ 8ಕ್ಕೆ ಆಶಿಶ್‌ ಮಿಶ್ರಾಗೆ ಎಸ್‌ಐಟಿ ಮುಂದೆ ಹಾಜರಾಗಲು ಸಮನ್ಸ್‌ ನೀಡಲಾಗಿತ್ತು. ಗೈರಾದ ಕಾರಣ 2ನೇ ಸಮನ್ಸ್‌ ಜಾರಿ ಮಾಡಲಾಗಿತ್ತು. ಲಖಿಂಪುರದ ಅಪರಾಧ ವಿಭಾಗದ ಕಚೇರಿಗೆ ಅಕ್ಟೋಬರ್‌ 9 ರಂದು ಬೆಳಗ್ಗೆ ಆಶಿಶ್‌ ಮಿಶ್ರಾ ಹಾಜರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್‌ 7ರಂದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಶ್‌ ಮಿಶ್ರಾ ಸೇರಿ ಇದುವರೆಗೆ 3 ಮಂದಿಯನ್ನು ಬಂಧಿಸಲಾಗಿದೆ. ಆಶಿಶ್ ಮಿಶ್ರಾ ಬಂಧನ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದ ರೈತ ಸಂಘಟನೆಗಳು ಹಾಗೂ ವಿಪಕ್ಷಗಳ ಬೇಡಿಕೆ ಈಡೇರಿದಂತಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು