ಮಾತು ಕೇಳದ ಗಂಡ, ಅತ್ತೆ, ಮಾವನನ್ನು ಕೊಂದ ಮಹಿಳೆ!…ಬುದ್ದಿ ಕೆಟ್ಟಾಗ ಸೊಸೆ ಮಾಡಿದ ಕೆಲಸಕ್ಕೆ ಬೀದಿ ಪಾಲಾದ ಮಕ್ಕಳು..ಕ್ರೈಂ ಸ್ಟೋರಿ ಓದಿ…

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಡ್ಯ(12-11-2020): ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ, ಅತ್ತೆ ,ಮಾವನನ್ನು ಮಹಿಳೆಯೋರ್ವಳು ಕೊಲೆ ಮಾಡಿರುವ ಆತಂಕಕಾರಿ ಘಟನೆ ನಡೆದಿದೆ.

 ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ಅ. 18ರಂದು ಗೃಹಿಣಿಯೊಬ್ಬಳು ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ, ಅತ್ತೆ, ಮಾವನಿಗೆ ಕಾಯಿ ತುರಿಯವ ಮಣೆಯಿಂದ ಹಲ್ಲೆ ಮಾಡಿದ್ದಳು.

ಘಟನೆಯಲ್ಲಿ ಮಹಿಳೆಯ ಗಂಡ ನಾಗರಾಜು (47) ಅತ್ತೆ ಕುಳ್ಳಮ್ಮ, ಮಾವ ವೆಂಕಟೇ ಗೌಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಮೊದಲು ಗಂಡ ನಾಗರಾಜು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಬಳಿಕ ಅತ್ತೆ ಮಾವ ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂವರನ್ನು ಕೊಲೆಗೈದ ಆರೋಪದ ಮೇಲೆ ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಸುಂದರವಾದ ಕಟುಂಬ ಒಡೆದು ಹೋಗಿದೆ. ನಾಗಮಣಿಯ ಪತಿಯೂ ಸತ್ತ. ಇಬ್ಬರು ಮಕ್ಕಳು ಬೀದಿ ಪಾಲಾಗಿದ್ದಾರೆ.

ಇಬ್ಬರು ಗಂಡು ಮಕ್ಕಳನ್ನು ಸದ್ಯ ಊರಿನವರು ನೋಡಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು