ಮಾಜಿ ನ್ಯಾಯಾಧೀಶೆಯೇ ಲಂಚಕೊಟ್ಟು ಲಾಬಿ ಮಾಡಿದ್ದರು| ವಂಚಕ ಸ್ವಾಮಿಯ ಮೋಸದ ಬಲೆಗೆ ಬಿದ್ದಿದ್ದ ಮಹಿಳಾ ಜಡ್ಜ್!

yuvaraj swamy
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(08-01-2021): ಮಾಜಿ ನ್ಯಾಯಾಧೀಶೆಯೊಬ್ಬರು ಗವರ್ನರ್ ಹುದ್ದೆಗಾಗಿ ಲಾಬಿ ಮಾಡಲು 8.8 ಕೋಟಿ ರೂ.ಲಂಚವನ್ನು ವಂಚಕ ಯುವರಾಜ್ ಸ್ವಾಮಿಗೆ ನೀಡಿರುವ ಕುರಿತು ತನಿಖೆಯ ವೇಳೆ ಬಹಿರಂಗವಾಗಿದೆ. ಕಾನೂನು ಪಾಲಕರೋರ್ವರು ಅಧಿಕಾರದ ಆಸೆಗೆ ಲಂಚವನ್ನು ನೀಡಿ ಸುದ್ದಿಯಾಗಿದ್ದು ನಿಜಕ್ಕೂ ಆಘಾತಕಾರಿಯಾಗಿದೆ.

ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಎಚ್ ಎಂ ನಾಗರಾಜ್ ಅವರು ಮಾಹಿತಿ ನೀಡಿದ್ದು, ನಿವೃತ್ತ ಮಹಿಳಾ ನ್ಯಾಯಾಧೀಶೆಗೆ ಯುವರಾಜ್ 8.8 ಕೋಟಿ ರೂ ವಂಚಿಸಿದ್ದಾನೆಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಸ್ವಾಮಿ ನ್ಯಾಯಾಧೀಶೆಯನ್ನು ರಾಜ್ಯಪಾಲರನ್ನಾಗಿ ನೇಮಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಿದೆ.

ನಿವೃತ್ತ ನ್ಯಾಯಾಧೀಶೆಗೆ  ಪೊಲೀಸ್ ಅಧಿಕಾರಿಯೊಬ್ಬರು ಯುವರಾಜ್ ಸ್ವಾಮಿಯನ್ನು ಪರಿಚಯ ಮಾಡಿಸಿದ್ದರು. ಇದಕ್ಕಾಗಿ ಪೊಲೀಸ್ ಅಧಿಕಾರಿ ಸ್ವಾಮಿಯಿಂದ ಬರೋಬ್ಬರಿ 2.75 ಕೋಟಿ ರೂ. ಪಡೆದಿದ್ದರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ನಾಗರಬಾವಿ ನಿವಾಸಿ 52 ವರ್ಷದ ಯುವರಾಜ್ ಸ್ವಾಮಿ ಜ್ಯೋತಿಷಿ ಮತ್ತು ವಾಸ್ತು ತಜ್ಞ. ಈತ ಪ್ರಭಾವಿಗಳ ಜೊತೆ ಫೋಟೋ ಇಟ್ಟುಕೊಂಡು ವಂಚನೆ ಮಾಡುತ್ತಿದ್ದ.  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಳಿಕ ಈತನ ಅಸಲಿಯತ್ತು ಇದೀಗ ಬಹಿರಂಗವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು