ಕುವೈತ್ ಸಿಟಿ(4-11-2020): ಕುವೈತಿನಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ತಡೆಯುವ ಸಲುವಾಗಿ ಇನ್ನೊಂದು ಸುತ್ತಿನ ಲಾಕ್ಡೌನ್ ಹೇರಲು ಕುವೈತ್ ಆರೋಗ್ಯ ಸಚಿವ ಬಾಸಿಲ್ ಅಲ್-ಸಬಾಹ್ ಹೇಳಿದ್ದಾರೆ.
ಏರುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಇನ್ನೂ ಇದೇ ರೀತಿ ಮುಂದುವರಿದರೆ ಲಾಕ್ಡೌನ್ ಅನಿವಾರ್ಯವಾಗುತ್ತದೆ ಎಂದು ಸಂಪುಟ ಸಭೆಯಲ್ಲಿ ಅವರು ನಿರ್ದೇಶನ ನೀಡಿದ್ದಾರೆ. ಎರಡು ವಾರಗಳ ಕಾಲ ರಾತ್ರಿ ಒಂಭತ್ತು ಗಂಟೆಯಿಂದ ಮುಂಜಾನೆ ನಾಲ್ಕರ ವರೆಗೆ ಕರ್ಪ್ಯೂ ಹೇರಬೇಕಾಗಬಹುದು. ಮಾಲುಗಳು, ಕ್ಯಾಂಟೀನುಗಳ, ವೈಮಾನಿಕ ಸೇವೆಗಳು, ಇತ್ಯಾದಿಗಳ ಮೇಲೆ ನಿಯಂತ್ರಣ ಬೇಕೆಂದು ಅವರು ತಿಳಿಸಿದ್ದಾರೆ.