ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಾರ್ಯನಿರ್ವಹಿಸಲಿದೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(11-11-2020): ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನವೆಂಬರ್ ಹದಿನೇಳರಿಂದ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಾರ್ಯನಿರ್ವಹಿಸಲಿದೆ. ಸಿವಿಲ್ ಏವಿಯೇಷನ್‌ ಡೈರೆಕ್ಟ್ ಜನರಲ್ ಇಂಜಿನಿಯರ್ ಸುಲೈಮಾನ್ ಅಲ್ ಫೌಸಾನ್ ಈ ವಿಚಾರವನ್ನು ತಿಳಿಸಿರುತ್ತಾರೆ

ಸದ್ಯದ ಮಟ್ಟಿಗೆ ವಾಣಿಜ್ಯ ವಿಮಾನಗಳು ರಾತ್ರಿ ಸಮಯದಲ್ಲಿ ಹಾರಾಟ ನಡೆಸುತ್ತಿಲ್ಲ. ಮತ್ತು ವಿಮಾನ ನಿಲ್ದಾಣವು ಒಟ್ಟು ಮೂವತ್ತು ಶೇಕಡಾದಷ್ಟು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ನೂರು ವಿಮಾನಗಳಿಗಷ್ಟೇ ಹಾರಾಟಕ್ಕೆ ಅನುಮತಿ ಇರುವುದು.

ನವೆಂಬರ್ ಹದಿನೇಳರಿಂದ ದಿನದ ಇಪ್ಪತ್ತನಾಲ್ಕು ಗಂಟೆಯೂ ವಿಮಾನ ನಿಲ್ದಾಣ ಕಾರ್ಯನಿರ್ವಹಿಲಿದ್ದರೂ, ಸೇವೆ ನೀಡುವ ವಿಮಾನಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗುವುದಿಲ್ಲ ಎಂದು ತಿಳಿದುಬಂದಿದೆ.

ಕೊರೋನಾ ತಡೆಯುವ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿದರೆ ಮತ್ತು ಅಗತ್ಯವಾಗಿರುವಷ್ಟು ಕೆಲಸಗಾರರನ್ನು ನೇಮಿಸಿಕೊಂಡರೆ, ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಾರ್ಯನಿರ್ವಹಿಸಲು ಯಾವುದೇ ಸಮಸ್ಯೆಯಿಲ್ಲವೆಂದು ಆರೋಗ್ಯ ಸಚಿವಾಲಯವು ಈ ಮೊದಲೇ ತಿಳಿಸಿತ್ತು. ಕುವೈತ್ ಏರ್‌ವೇಸ್ ಇದಕ್ಕೆ ತಯಾರಾಗಿದೆಯೆನ್ನಲಾಗಿದ್ದು, ಆರೋಗ್ಯ ಇಲಾಖೆಯ ಔಪಚಾರಿಕ ಅನುಮತಿಯನ್ನೂ ಪಡೆದುಕೊಳ್ಳುವ ನಿರೀಕ್ಷೆಯಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು