ಕುವೈತ್ ಸಿಟಿ(9-11-2020) ಚಳಿಗಾಲದ ಆಗಮನದ ಹಿನ್ನೆಲೆಯಲ್ಲಿ ಪ್ರಜೆಗಳಿಗೆ ಮತ್ತು ನಿವಾಸಿಗಳಿಗೆ ಕುವೈತ್ ಆರೋಗ್ಯ ಸಚಿವಾಲಯವು ವಿಶೇಷ ಸೂಚನೆಗಳನ್ನು ಪ್ರಕಟಿಸಿದೆ.
ಅಸ್ತಮಾ ಮತ್ತಿತರ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕರಾಗಬೇಂಕೆಂದು ಅದು ಹೇಳಿದೆ. ಅಂಥವರು ಮನೆಯಲ್ಲೇ ಉಳಿಯಬೇಕು. ಅತ್ಯಗತ್ಯ ಸಂದರ್ಭಗಳ ಹೊರತು ಮನೆಯ ಹೊರಗೆ ಸುತ್ತಾಡಬಾರದು. ವೈದ್ಯರ ಸಲಹೆಯಿದ್ದರೆ, ಸದಾ ಇನ್ ಹೇಲರನ್ನು ಜೊತೆಗಿಟ್ಟುಕೊಳ್ಳಬೇಕು. ಮತ್ತು ರೋಗವು ನಿಯಂತ್ರಣಕ್ಕೆ ಬರದಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದಿದೆ.
ಜೊತೆಗೆ ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ದೇಶಗಳಿಗೆ ಪ್ರಯಾಣಿಸುವುದರಿಂದ ದೂರವುಳಿಯಬೇಕೆಂದು ಆರೋಗ್ಯ ಸಚಿವಾಲಯವು ಒತ್ತಿ ಹೇಳಿದೆ.