ಕುವೈತಿಗೆ ನೇರವಾಗಿ ಪ್ರಯಾಣಿಸಲು ಆರೋಗ್ಯ ಸಚಿವಾಲಯದ ಸಮ್ಮತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(12-11-2020) ಭಾರತ ಸೇರಿದಂತೆ ಮೂವತ್ತನಾಲ್ಕು ದೇಶಗಳ ಪ್ರಜೆಗಳಿಗೆ ನೇರವಾಗಿ ಕುವೈತಿಗೆ ಪ್ರಯಾಣಿಸಲು ನಿಷೇಧವಿತ್ತು. ಈ ದೇಶಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರವಾಗಿ ಹರಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಇದಕ್ಕಾಗಿ ಹಲವು ಪ್ರಯಾಣಿಕರು ಯುಎಇ ಮೊದಲಾದ ದೇಶಗಳಿಗೆ ಹೋಗಿ, ಅಲ್ಲಿ ಹದಿನಾಲ್ಕು ದಿನ ತಂಗಿ, ಅಲ್ಲಿಂದ ಕುವೈತಿಗೆ ಹೋಗುತ್ತಿದ್ದರು. ಇದರಿಂದಾಗಿ ಒಂದಷ್ಟು ಸಮಯ, ಹಣ ವ್ಯಯವಾಗುತ್ತಿದ್ದಲ್ಲದೇ ಕೆಲವಾರು ಸಮಸ್ಯೆಗಳೂ ಎದುರಾಗುತ್ತಿದ್ದವು.

ಈಗ ನೇರ ಪ್ರಯಾಣ ನಿಷೇಧಿಸಿದ ದೇಶಗಳಿಂದ ಪ್ರಯಾಣಿಕರು ಕುವೈತಿಗೆ ಬರಬೇಕೆಂಬ ಬೇಡಿಕೆಗೆ ಕುವೈತ್ ಆರೋಗ್ಯ ಸಚಿವಾಲಯವು ಒಪ್ಪಿಗೆ ನೀಡಿದೆ. ಆದರೆ ಒಂದು ವಾರ ಕಾಲ ಹೋಟೆಲ್ ಕ್ವಾರೈಂಟೈನಿಗೆ ಒಳಗಾಗಬೇಕಾದುದು ಕಡ್ಡಾಯವಾಗಿದೆ. ಕ್ವಾರೈಂಟೈನ್ ಮುಗಿದ ಬಳಿಕ ಕೊರೋನಾ ಪರೀಕ್ಷೆ ನಡೆಸಿ, ಅದರಲ್ಲಿ ನೆಗೆಟಿವ್ ಬಂದರೆ, ಕ್ವಾರೈಂಟೈನ್ ಮುಗಿಸಿ, ಉದ್ಯೋಗಕ್ಕೆ ಹಾಜರಾಗಬಹುದು.

ಒಂದು ವೇಳೆ ಕೊರೋನಾ ಪಾಸಿಟಿವ್ ಫಲಿತಾಂಶ ಬಂದರೆ, ಮತ್ತೆ ಒಂದು ವಾರ ಹೋಟೆಲ್ ಕ್ವಾರೈಂಟೈನಿಗೆ ಒಳಗಾಗಬೇಕು. ಮೊದಲ ಮತ್ತು ನಂತರದ ಕ್ವಾರೈಂಟೈನುಗಳಾಗಲಿ, ಕೊರೋನಾ ಪರೀಕ್ಷೆ ನಡೆಸುವುದಕ್ಕಾಗಲೀ ತಗಲುವ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು