ಕುವೈತ್: ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವಂತೆ ಮನವಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(5-11-2020): ಕೋರೋನಾ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಬೇಕೆಂದು ಕುವೈತಿನ ಸೆಂಟ್ರಲ್ ಬ್ಲಡ್ ಬ್ಯಾಂಕ್ ಮನವಿ ಮಾಡಿದೆ.

ದೇಶದ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬರದೇ ಇರುವ ಹಿನ್ನೆಲೆಯಲ್ಲಿ ಪ್ಲಾಸ್ಮಾಗೆ ಬೇಡಿಕೆ ಹೆಚ್ಚಿದೆ. ಪ್ಲಾಸ್ಮಾ ಚಿಕಿತ್ಸೆಯು ನಿರೀಕ್ಷಿತ ಫಲ ನೀಡುತ್ತವೆಯೆಂದು ಬ್ಲಡ್ ಬ್ಯಾಂಕ್ ಹೇಳಿದೆ.

ಪ್ಲಾಸ್ಮಾ ದಾನ ಮಾಡುವವರು ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಯಾವುದೇ ರೋಗ ಲಕ್ಷಣಗಳನ್ನು ಹೊಂದಿರಬಾರದು. ಗುಣಮುಖರಾದ ಬಳಿಕ ಎರಡು ವಾರಗಳ ಕ್ವಾರೈಂಟೈನ್ ಅವಧಿಯನ್ನು ಪೂರ್ಣಗೊಳಿಸಿರಬೇಕು. ಹದಿನೆಂಟು ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿರಬೇಕು. ಯಾವುದೇ ಕೊರೋನೇತರ ಮಾರಕ ರೋಗಗಳನ್ನು ಹೊಂದಿರಬಾರದು. ಇನ್ನುಳಿದಂತೆ ಕೊರೋನಾದಿಂದ ಗುಣಮುಖರಾದ ಯಾರಿಗೂ ಪ್ಲಾಸ್ಮಾ ನೀಡಬಹುದಾಗಿದೆ ಎಂದು ಆರೋಗ್ಯ ಸಚಿವಾಲಯದ ರಕ್ತ ವಿನಿಮಯ ವಿಭಾಗದ ಡಾ. ರೀಮ್ ಅಲ್ ರಿಳ್ವಾನ್ ಸ್ಪಷ್ಟಪಡಿಸಿದರು.

ಪ್ಲಾಸ್ಮಾ ದಾನಿಗಳು ಸಂಬಂಧಿತ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಎಪ್ರಿಲ್‌ನಲ್ಲಿ ಪ್ಲಾಸ್ಮಾ ಸ್ವೀಕರಿಸಲು ಆರಂಭಿಸಿದ ಬಳಿಕ ಇದುವರೆಗೆ ಸಾವಿರದ ಏಳು ನೂರು ಪ್ಲಾಸ್ಮಾ ಕಿಟ್ಟುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು