ಹಿರೇಕೆರೂರ(13-11-2020): ಮಾಲಕನನ್ನು ಕಟ್ಟಿಹಾಕಿ ಕುರಿಗಳನ್ನು ಕಳ್ಳತನ ಮಾಡಿರುವ ಘಟನೆ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ದುಷ್ಕರ್ಮಿಗಳ ತಂಡ ತಡರಾತ್ರಿ ಶೆಡ್ಗೆ ನುಗ್ಗಿ ಮಾಲಕ ಬಸನಗೌಡ ಎಂಬವರನ್ನು ಕಟ್ಟಿಹಾಕಿ 20ಕ್ಕೂ ಅಧಿಕ ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ತಂಡದಲ್ಲಿ 8ಕ್ಕೂ ಅಧಿಕ ಮಂದಿ ಇದ್ದರು ಎಂದು ಹೇಳಲಾಗಿದೆ.
ಕುರಿಗಳ ಜೊತೆಗೆ ಬಸನಗೌಡ ಅವರ ಮೊಬೈಲ್ ಕಳ್ಳತನ ಮಾಡಿ, ಬೈಕ್ ಜಖಂಗೊಳಿಸಿ ಪರಾರಿಯಾಗಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.