ನವದೆಹಲಿ(20-11-2020): ದೇಶಾದ್ಯಂತ ಕುತೂಹಲ ಮೂಡಿಸಿರುವ ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಇನ್ನೊಂದು ತಿರುವು. ಸ್ಟಾಂಡ್ ಅಪ್ ಕಾಮಿಡಿಯನ್ ಕಮ್ರಾ ವಿರುದ್ಧ ಎರಡನೇ ಬಾರಿ ನ್ಯಾಯಾಂಗ ನಿಂದನೆ ಕೇಸು ನಡೆಯಲಿದೆ.
ಈ ಬಾರಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ವಿರುದ್ಧ ಅಸಭ್ಯ ಟೀಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕೇಸು ನಡೆಯಲಿದೆ. ಅಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.
One of these 2 fingers is for CJI Arvind Bobde… ok let me not confuse you it’s the middle one
😂😂😂 pic.twitter.com/IhoYIP3Ebe— Kunal Kamra (@kunalkamra88) November 18, 2020
ಮೊದಲನೆಯ ಕೇಸು ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟನ್ನು ಟೀಕಿಸಿದ ಕಾರಣಕ್ಕೆ ದಾಖಲಾಗಿತ್ತು. ಅವರು ಸುಪ್ರೀಂ ಕೋರ್ಟನ್ನು “ಸುಪ್ರೀಂ ಜೋಕ್” ಎಂದು ಅಪಹಾಸ್ಯ ಮಾಡಿದ್ದರು. ಇದಕ್ಕಿರುವ ಶಿಕ್ಷೆಯಾಗಿ ದಂಡ ಕಟ್ಟುವುದನ್ನು ತಿರಸ್ಕರಿಸಿ, ಜೈಲಿಗೆ ಹೋಗಲು ಸಿದ್ಧವೆಂದು ಹೇಳಿದ್ದರು.