ಕುಂಭ ಮೇಳದ ಪ್ರಧಾನ ಸಾಧು, ಮಹಾ ನಿರ್ವಾಣಿ ಅಖಾಡದ ಮುಖ್ಯಸ್ಥ ಕೋವಿಡ್ ಗೆ ಬಲಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹರಿದ್ವಾರ: ಕುಂಭ ಮೇಳದಲ್ಲಿ ಭಾಗವಹಿಸಿದ್ದ ಪ್ರಧಾನ ಸಾಧು, ಮಹಾ ನಿರ್ವಾಣಿ ಅಖಾಡದ ಮುಖ್ಯಸ್ಥ ಕೋವಿಡ್ ಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಕೋವಿಡ್ ತೀವ್ರವಾಗಿರುವ ಸಮಯದಲ್ಲಿಯೇ ಹರಿದ್ವಾರದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ಕುಂಭಮೇಳ ನಡೆಸಲು ಸರಕಾರ ಅನುಮತಿ ನೀಡಿದೆ.

ಇದು ದೇಶಾದ್ಯಂತ ಆಕ್ರೋಶಕ್ಕೂ ಕಾರಣವಾಗಿದೆಯಲ್ಲದೇ, ಕೋವಿಡ್ ಸಣ್ಣ ಪ್ರಮಾಣದಲ್ಲಿ ಹರಡುತ್ತಿದ್ದ ಸಮಯದಲ್ಲಿ ತಬ್ಲೀಗ್ ಜಮಾತ್ ವಿರುದ್ಧ ಭಾರತೀಯ ಮಾಧ್ಯಮಗಳು ಮತ್ತು ಸರಕಾರ ತೆಗೆದುಕೊಂಡಿದ್ದ ನಿಲುವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಜ್ಞಾಪಿಸಿಕೊಂಡು, ಸರಕಾರವನ್ನೂ, ಮಾಧ್ಯಮಗಳನ್ನೂ ಟ್ರೋಲ್‍ಗೆ ಗುರಿಯಾಗಿಸಿದ್ದಾರೆ.

ದೇಶಾದ್ಯಂತ ಕೋವಿಡ್ ಮಾರ್ಗಸೂಚಿಗಳು ಜಾರಿಯಲ್ಲಿದ್ದರೂ, ಕುಂಭ ಮೇಳದಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲಿಸದೇ, ಮಾಸ್ಕ್ ಧರಿಸದೇ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ.

ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ 30 ಸಾಧುಗಳಲ್ಲಿ ಕೊರೊನಾ ಸೋಂಕು ಇರುವುದು ಈಗಾಗಲೇ ದೃಢಪಟ್ಟಿದೆ. ಅದು ಇನ್ನಷ್ಟು ಹೆಚ್ಚಾಗಬಹುದೆಂದು ಭೀತಿ ಪಡಲಾಗಿದೆ.

ಇದೀಗ ಅರುವತ್ತೈದು ವರ್ಷದ ಪ್ರಧಾನ ಸಾಧು, ಕಪಿಲ್ ದೇವ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಮೇಳದಲ್ಲಿ ಭಾಗವಹಿಸಲು ಮಧ್ಯಪ್ರದೇಶದಿಂದ ಆಗಮಿಸಿದ್ದರು. ವಾರದ ಆರಂಭದಲ್ಲಿ ಕೋವಿಡ್ ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಸದ್ಯ ಹರಿದ್ವಾರದ ಅಖಾಡಗಳಲ್ಲಿ ವೈದ್ಯಕೀಯ ತಂಡಗಳು ಬೀಡು ಬಿಟ್ಟಿದೆ. ಸಾಧುಗಳನ್ನು ನಿರಂತರವಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕಳೆದ ಐದು ದಿನಗಳಲ್ಲಿ ಹರಿದ್ವಾರದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆ 2167 ಕ್ಕೆ ಏರಿದೆ. ಅದೇ ವೇಳೆ ದೇಶಾದ್ಯಂತ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 2,17,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು