ನಿಖಿಲ್ ನನ್ನು ನಾನು ಬೇಡ ಎಂದ್ರೂ, ನೀವೆ ನಿಲ್ಲಿಸಿ ಸೋಲಿಸಿದ್ರಿ- ಭಾವುಕರಾದ ಕುಮಾರಸ್ವಾಮಿ!

kumarswamy
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮದ್ದೂರು (22-11-2020): ನನ್ನ ಮಗನನ್ನು ಸೋಲಿಸಿದಿರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕರಾದ ಪ್ರಶಂಗ ಬ್ಯಾಡರಹಳ್ಳಿ ಗ್ರಾಮದಲ್ಲಿ  ನಡೆಯಿತು.

ಮಾರುತಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಿದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಿಎಂ ಆದಾಗ ಮಂಡ್ಯಕ್ಕೆ ಬರಫೂರ ಅನುದಾನ ನೀಡಿದೆ. ಬಿಜೆಪಿ ನಮ್ಮನ್ನು ಮಂಡ್ಯ ಬಜೆಟ್ ಎಂದು ಟೀಕಿಸಿತು. ನಿಖಿಲ್ ನನ್ನು ನಿಲ್ಲಿಸುವಂತೆ ನೀವೇ ಹೇಳಿದ್ರಿ. ಆದರೆ ಕೊನೆಗೆ ಸೋಲಿಸಿದ್ರಿ ಎಂದು ಭಾವುಕರಾಗಿದ್ದಾರೆ.

ಬಿಜೆಪಿ ಪಕ್ಷ ಬೆಳೆದಂತೆ ದೇಶಕ್ಕೆ ಅನಾಹುತ ತಂದೊಡ್ಡಲಿದೆ. ಸಿಎಂ ಆಗಿದ್ದಾಗ ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ನೀಡಿದ್ದೇನೆ. ಉತ್ತರ ಕರ್ನಾಟಕದ ಜನರು ನೆರೆ ಹಾವಳಿಗೆ ತುತ್ತಾದಾಗ 10 ಲಕ್ಷ ಮನೆಗಳನ್ನು ಹಸ್ತಾಂತರಿಸಿದ್ದೇನೆ. ಆದರೂ ನಿಖಿಲ್ ಗೆ ಮತನೀಡಿಲ್ಲ ನೀವು ಎಂದು ಕುಮಾರಸ್ವಾಮಿ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು