ರಾಮಮಂದಿರದ ಫಂಡ್ ಕಲೆಕ್ಸನ್ ಗೆ ಬಂದವರು ನನಗೆ ಬೆದರಿಕೆ ಹಾಕಿದ್ರು-ಕುಮಾರಸ್ವಾಮಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(17-02-2021): ನನ್ನ ಮನೆಗೆ ರಾಮಮಂದಿರದ ಫಂಡ್ ಕಲೆಕ್ಸನ್ ಗೆ ಬಂದವರು ಕೊಡ್ತೀರೋ ಇಲ್ವೋ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರವಾದಂತಹ ಆರೋಪವನ್ನು ಮಾಡಿದ್ದಾರೆ.

ಮಾದ್ಯಮದ ಜೊತೆ ಮಾತನಾಡಿದ ಕುಮಾರಸ್ವಾಮಿ, ನನ್ನ ಮನೆಗೆ ಮೂರು ವ್ಯಕ್ತಿಗಳು ಬಂದು ದೇಣಿಗೆ ಕೇಳಿದ್ದಾರೆ. ಕೊಡ್ತೀರೋ ಇಲ್ವೋ ಎಂದು ಬೆದರಿಕೆ ಹಾಕಿದ್ದಾರೆ. ಜನ ಕೊಟ್ಟ ದೇಣಿಗೆಯ ಲೆಕ್ಕ ಕೊಡುವವರು ಯಾರು? ಹಣ ಕೊಡದವರ ಮನೆಗೆ ಮಾರ್ಕ್ ಮಾಡಲಾಗುತ್ತಿದೆ. ಯಾಕೆ ಈ ಕೃತ್ಯವನ್ನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಪಕ್ಷಕ್ಕೆ ಅನುಕೂಲ ಆಗಲು ನಾನು ಹೇಳಿಕೆ ಕೊಡುವುದಿಲ್ಲ. ಮೊಳೆ ಹೊಡೆಯೋ ಕೆಲಸ ಮಾಡುತ್ತಿರುವುದು ದೇಶ ರಕ್ಷಣೆಯ ಲೇಬಲ್ ಹಾಕಿರುವವರು. ಇದನ್ನು ಹೇಳಲು ನನಗೇಕೆ ಅಂಜಿಕೆ? ಹಣ ಸಂಗ್ರಹಕ್ಕೆ ಅನುಮತಿ ಕೊಟ್ಟವರ್ಯಾರು?

ವಿಶ್ವ ಹಿಂದೂ ಪರಿಷತ್ ಗೆ ಸಂಗ್ರಹದ ಹಣ ಕೊಡ್ತಾರಾ ? ನಾವು ಚಿಲ್ಲರೆ ರಾಜಕೀಯ ಮಾಡಿಕೊಂಡು ಬಂದಿಲ್ಲ. ಧರ್ಮವನ್ನು ಭ್ರಷ್ಟಾಚಾರಕ್ಕೆ ದೂಡುವ ಹೀನ ಕೆಲಸ ಮಾಡಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್ ದರ ಮೂರು ಅಂಕಿಗೆ ತಲುಪಲಿದೆ. ಗ್ಯಾಸ್ ಗೆ ಉಜ್ವಲ ಯೋಜನೆ ಎನ್ನುತ್ತಿದ್ದಾರೆ. ಈಗ ಏನಾಗುತ್ತಿದೆ ಅನ್ನೋದು ಜನರಿಗೆ ಗೊತ್ತಿದೆ. ನಾನು ಲಘುವಾಗಿ ಯಾವುದನ್ನೂ ಹೇಳಿಲ್ಲ. ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು