ಕುವೈತ್ ಸಂಸದೀಯ ಚುನಾವಣೆ: 33 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(13-11-2020): ಕುವೈತ್ ಸಂಸದೀಯ ಚುನಾವಣೆಗೆ ಸಲ್ಲಿಸಲಾಗಿದ್ದ ನಾಮಪತ್ರಗಳಲ್ಲಿ 33 ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮತ್ತು ಸ್ಪರ್ಧಿಸಲು ಅನರ್ಹರಾಗಿರುವುದೆಂಬ ಕಾರಣಗಳನ್ನು ಚುನಾವಣಾ ಆಯೋಗ ನೀಡಿದೆ.

ತಿರಸ್ಕೃತಗೊಂಡ ಅಭ್ಯರ್ಥಿಗಳಲ್ಲಿ ಪ್ರತಿಭಟನೆ ಮಾಡಿದ ಕಾರಣದಿಂದ ಅನರ್ಹರಾದರವರೂ, ಮಾಜಿ ಸಂಸದರೂ, ವಿರೋಧ ಪಕ್ಷದ ಸದಸ್ಯರೂ ಇದ್ದಾರೆ. ಈ ವಿಚಾರದಲ್ಲಿ ಇವರಿಗೆ ನ್ಯಾಯಾಲಯದ ಕದ ತಟ್ಟುವ ಅವಕಾಶವಿದೆ.

ಚುನಾವಣಾ ಅಯೋಗದ ನಡೆಯನ್ನು ಟೀಕಿಸಿದ ವಿರೋಧ ಪಕ್ಷವು, ಸಾರ್ವಜನಿಕ ಹಿತಾಸಕ್ತಿ ಉದ್ದೇಶವನ್ನಿಟ್ಟು ಮಾಡಲಾದ ಪ್ರತಿಭಟನಾ ರ‌್ಯಾಲಿಯು ಕ್ರಿಮಿನಲ್ ಅಪರಾಧ ಅಲ್ಲ ಎಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು