ಕುಡಿಯುವ ನೀರಿಗಾಗಿ ಗ್ರಾಮದ ಜನರಿಂದ ಪರದಾಟ: ಜವಾಬ್ಧಾರಿಯುತ ಅಧಿಕಾರಿಗಳೇ ಇತ್ತ ಗಮನಿಸಿ….

yadgiri
Share on facebook
Share on twitter
Share on linkedin
Share on whatsapp
Share on telegram
Share on email
Share on print

ಯಾದಗಿರಿ(24-11-2020): ಮುದ್ನಾಳ  ದೊಡ್ಡ ತಾಂಡ    ಭೀಮನಗರದಲ್ಲಿ ನೀರಿನ ಸಮಸ್ಯೆಯಿಂದಾಗಿ ಊರಿನ ಜನರು ನೀರಿಗಾಗಿ ಪರದಾಡುವಂತಾಗಿದೆ.

ಯಾದಗಿರಿ ಜಿಲ್ಲೆಯ ಮುದ್ನಾಳ  ದೊಡ್ಡ ತಾಂಡ  ಭೀಮನಗರದಲ್ಲಿ 100 -200  ಮನೆಗಳಿದೆ. ಈ ಗ್ರಾಮಕ್ಕೆ ದಿನಕ್ಕೆ ಒಂದೇ ಬಾರಿ ನೀರು ಬೆಳಗ್ಗೆ ಸಣ್ಣ ಪ್ರಮಾಣದಲ್ಲಿ ಬರುತ್ತದೆ. ಇದೀಗ  ಬೋರ್ವೆಲ್ ಸುಟ್ಟು ಹೋಗಿದ್ದು, ಆ ನೀರು ಕೂಡ ಸ್ಥಳೀಯರಿಗೆ ಇಲ್ಲವಾಗಿದೆ.

ಈ ಬಗ್ಗೆ ಅಳಲನ್ನು ತೋಡಿಕೊಂಡ ಯಂಕಪ್ಪ ರಾಠೋಡ ಮುದ್ನಾಳ ಅವರು ನೀರಿನ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸ್ಥಳೀಯ ಆಡಳಿತಕ್ಕೆ ಮನವಿಯನ್ನು ಮಾಡಿದ್ದಾರೆ. ಮಳೆಗಾಲ ಇನ್ನೇನು ಹೊರಟೇ ಹೋಯ್ತು ಎನ್ನುವಷ್ಟರಲ್ಲಿ ಜನರು ನೀರಿಗಾಗಿ ಪರದಾಡುವಂತಾದರೆ, ಬೇಸಿಗೆ ಕಾಲದಲ್ಲಿ ಈ ಗ್ರಾಮದ ಜನರ ಗೋಳು ಹೇಳತೀರದಂತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು