ಕೆಎಸ್ಆರ್‍ ಟಿಸಿ ನಷ್ಟ ಪ್ರಯಾಣಿಕರ ತಲೆಗೆ…!?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೆಎಸ್ಆರ್‍ ಟಿಸಿ ಅನುಭವಿಸುತ್ತಿರುವ ಆರ್ಥಿಕ ನಷ್ಟವನ್ನು ಪ್ರಯಾಣಿಕರ ತಲೆಗೆ ಹಾಕಲಾಗುವುದೇ? ಇಂತಹ ಒಂದು ಸಾಧ್ಯತೆ ಇರುವುದು ಕಂಡು ಬರುತ್ತಿದೆ.

ಕೋವಿಡ್ ಮತ್ತು ಅದರ ಜೊತೆಗೇ ಬಂದ ಲಾಕ್ಡೌನ್, ಸಾಮಾನ್ಯ ಜನರಿಗೂ, ವಿವಿಧ ಸಂಸ್ಥೆಗಳಿಗೂ, ಸರಕಾರಕ್ಕೂ ಹಣಕಾಸಿನ ಮುಗ್ಗಟ್ಟನ್ನು ತಂದಿಟ್ಟಿದೆ. ಕೆಎಸ್ಆರ್‍ ಟಿಸಿ ಕೂಡಾ ಇದಕ್ಕೆ ಹೊರತಾಗಿಲ್ಲ.

ಬಸ್ಸುಗಳ ಸಂಚಾರವಿಲ್ಲದ ಕಾರಣದಿಂದ ಕೆಎಸ್ಆರ್‍ ಟಿಸಿ ಸಂಸ್ಥೆಯು ಪ್ರತಿನಿತ್ಯವೂ ಕೋಟಿಗಟ್ಟಳೆ ನಷ್ಟವನ್ನು ಅನುಭವಿಸುತ್ತಿದೆ. ಇದನ್ನು ತುಂಬಲು ಪ್ರಯಾಣದ ದರವನ್ನ ಏರಿಸುವ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಹೇಳಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಾವು ಬಸ್ ಸಂಚಾರ ಮಾಡಿರಲಿಲ್ಲ. ಮುಂದಿನ ವಾರ ಕೂಡ ಸಂಚಾರ ಇರಲ್ಲ. ಮುಂದೆ ಸರ್ಕಾರದ ಸೂಚನೆಯಂತೆ ಹಂತ ಹಂತವಾಗಿ ಓಡಾಟವನ್ನು ಪ್ರಾರಂಭಿಸಲಿದ್ದೇವೆ. ಶೇಕಡಾ 10-15 ರಷ್ಟು ಪ್ರಯಾಣ ದರ ಏರಿಕೆ ಮಾಡುವ ಬಗ್ಗೆ ಪರಿಶೀಲಿಸಲಿದ್ದೇವೆ ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು