ಈಶ್ವರಪ್ಪನವರೇ, ಶಾಸಕರನ್ನು ಖರೀದಿಸಲು ನಿಮ್ಮ ಬಳಿ ಪ್ರಿಂಟಿಂಗ್ ಮಷಿನ್ ಇತ್ತಾ? :ಎಸ್.ಆರ್.ಪಾಟೀಲ್ ತಿರುಗೇಟು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಈಶ್ವರಪ್ಪನವರೇ ಲಾಕ್ ಡೌನ್ ನಿಂದ ದುಡಿಯವ ಕೈಗಳಿಗೆ ಕೆಲಸವಿಲ್ಲ. ಬಡವರು, ಕೂಲಿ ಕಾರ್ಮಿಕರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಹತ್ತು ಸಾವಿರ ಪರಿಹಾರ ನೀಡಬೇಕು ಎಂದು ಕೇಳಿದರೆ ಪ್ರಿಂಟಿಂಗ್ ಮಷಿನ್ ಇಲ್ಲಾಂತ ಹೇಳ್ತೀರಲ್ಲ, ಶಾಸಕರನ್ನು ಖರೀದಿಸಲು ನಿಮ್ಮ ಬಳಿ ಪ್ರಿಂಟಿಂಗ್ ಮಷಿನ್ ಇತ್ತಾ..?
ನಾಚಿಕೆಯಾಗಬೇಕು ನಿಮಗೆ ಮತ್ತು ನಿಮ್ಮ ಸರಕಾರಕ್ಕೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತಿರುಗೇಟು ನೀಡಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ಸಿನ ನಾಯಕರೆಲ್ಲರೂ ಒತ್ತಾಯಿಸದ್ದೆವು. ಅದಕ್ಕೆ ಉತ್ತರವಾಗಿ ಸಚಿವ ಕೆ.ಎಸ್.ಈಶ್ವರಪ್ಪನವರು ನಾವೇನು ನೋಟ್ ಪ್ರಿಂಟ್ ಮಾಡ್ತಿದ್ದೀವಾ ಎಂದು ಪ್ರಶ್ನಿಸಿದ್ದಾರೆ. ಸಂವೇದನೆಯೇ ಇಲ್ಲದ ಇಂಥಾ ಸಚಿವರು ಈ ರಾಜ್ಯಕ್ಕೆ ಬೇಕಾ? ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಎಸ್.ಆರ್.ಪಾಟೀಲ್ ಅವರು, ಅಕ್ರಮವಾಗಿ ಶಾಸಕರಿಗೆ ಕೋಟಿ ಕೋಟಿ ದುಡ್ಡು ಕೊಟ್ಟು ಪಕ್ಷಕ್ಕೆ ಕರೆತಂದು ಸರಕಾರ ರಚಿಸುವಾಗ ಈ ಮಾತು ನೆನಪು ಆಗಲಿಲ್ಲವೇ ಈಶ್ವರಪ್ಪನವರೇ..? ಜನರಿಗೆ ಸಹಾಯ ಮಾಡ್ರಿ ಅಂದ್ರೆ ಇಂತಹ ಅಸಡ್ಡೆಯ ಮಾತುಗಳನ್ನು ಹೇಳ್ತಾ ಬರೀ ಕಾಲಹರಣ ಮಾಡ್ತಿದ್ದೀರಾ ಈಶ್ವರಪ್ಪನವರೇ..? ಹಾಗಾದರೆ ಕೇರಳ, ತಮಿಳು ನಾಡು, ಆಂಧ್ರ, ದೆಹಲಿ ಸರ್ಕಾರಗಳು ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿವೆಯೇ..? ಆ ರಾಜ್ಯಗಳು ಆರ್ಥಿಕ ಸಹಾಯ, ಉಚಿತ ಪಡಿತರ, ಉಚಿತ ಕೋವಿಡ್ ವಿಮೆ ಜಾರಿ ಮಾಡಿವೆಯಲ್ಲ. ಆ ರಾಜ್ಯಗಳಲ್ಲಿ ಇದು ಸಾಧ್ಯವಗುವುದಾದರೆ ನಿಮ್ಮ ಡಬಲ್ ಇಂಜಿನ್ ಸರಕಾರಕ್ಕೆ ಸಾಧ್ಯವಿಲ್ಲವಾ..? ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ರಾಮೀಣ ಜನರ ಕಷ್ಟವೇ ಗೊತ್ತಿಲ್ಲದ ನಿಮಗೆ ಗ್ರಾಮೀಣಾಭಿವೃದ್ಧಿ ಖಾತೆ ಸಿಕ್ಕಿದೆ. ನಿಮ್ಮ ಮನೆಯ ಹಣ ತಂದು ಜನರಿಗೆ ಸಹಾಯ ಮಾಡಿ ಎಂದು ಯಾರೂ ಕೇಳಿಲ್ಲ. ಜನ ತೆರಿಗೆ ಕಟ್ಟಿರುವ ದುಡ್ಡಿನಿಂದ ಪರಿಹಾರ ಕೊಡಿ. ದುಡಿಯುವ ವರ್ಗದವರ ಮತ ಬೇಕು, ಅವರ ತೆರಿಗೆ ಬೇಕು. ಆದ್ರೆ ಅವರ ಕಷ್ಟ ಮಾತ್ರ ಬೇಡ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು