ರೈತರು ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದರೆ, ಕೃಷಿ ಸಚಿವರು ಚಾದರ ಹೊದ್ದು ಮಲಗಿದ್ದಾರೆ: ರಾಜ್ಯ ಕಾಂಗ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ “ಇಲ್ಲ”ಗಳ ಪಟ್ಟಿಗೆ ಹೊಸ ಸೇರ್ಪಡೆ ಗೊಬ್ಬರ, ಬಿತ್ತನೆ ಬೀಜ. ಈ ಹದವಾದ ಮುಂಗಾರಿನ ವಾತಾವರಣದಲ್ಲಿ ರೈತರುಬೆಳೆ ಹಾಕಲು ತುರಾತುರಿಯಲ್ಲಿದ್ದರೂ ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾದರ ಹೊದ್ದು ಮಲಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ, ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ? ರೈತರಿಗೆ ಬೆಳೆ ವಿಮೆಯಲ್ಲಿ ಮೋಸ, ಹಿಂದಿನ ನೆರೆ ಪರಿಹಾರ ಇಲ್ಲ, ಲಾಕ್‌ಡೌನ್‌ನಲ್ಲಿ ಬೆಳೆ ನಷ್ಟ, ಲಾಕ್‌ಡೌನ್ ಪರಿಹಾರವೂ ಇಲ್ಲ, ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬರೆ, ಗೊಬ್ಬರದ ಪೂರೈಕೆ ಇಲ್ಲ, ಬಿತ್ತನೆ ಬೀಜಗಳೂ ಕೊಡುತ್ತಿಲ್ಲ.ಈ ಭ್ರಷ್ಟ ಬಿಜೆಪಿ ರೈತರನ್ನು ಆತ್ಮಹತ್ಯೆಯ ಪರಿಸ್ಥಿತಿಗೆ ದೂಡಿ ‘ಹೇಡಿಗಳು’ ಎಂದು ದೂಷಿಸುತ್ತದೆ ಎಂದು ಕಿಡಿಕಾರಿದೆ‌.

ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆ ಮಾಡದೆ ಸರ್ಕಾರವೇ ಕಾಳಸಂತೆಯನ್ನು ಪ್ರೋತ್ಸಾಹಿಸುತ್ತಿದೆ, ರೈತರು ಅನಿವಾರ್ಯವಾಗಿ ಬೀಜಗಳನ್ನು ದುಪ್ಪಟ್ಟು ಬೆಲೆಯಲ್ಲಿ ಕಾಳಸಂತೆಯಲ್ಲಿ ಖರೀದಿಸಿ ಮೋಸ ಹೋಗುತ್ತಿದ್ದಾರೆ, ರೈತರ ಈ ಸಮಸ್ಯೆಗಳನ್ನು ಚಿಂತಿಸದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಾಗೂ ಮಂತ್ರಿಗಳಿಗೆ ಕುರ್ಚಿ ಕದನ ಒಂದೇ ಪ್ರಾಧಾನ್ಯತೆ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು