ಕೊನೆಗೂ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಇಳಿಕೆ

petrol
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕಳೆದ ಒಂದು ವರ್ಷದಿಂದ ನಿರಂತರ ಏರಿಕೆಯಾಗುತ್ತಿದ್ದ ತೈಲ ದರವು ಇದೇ ಮೊದಲ ಬಾರಿಗೆ ಇಳಿಕೆ ಕಂಡುಬಂದಿದ್ದು, ಜನರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಇಂದು ಪೆಟ್ರೋಲ್ ದರ 18 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 17 ಪೈಸೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು 91 ರೂಪಾಯಿ 17 ಪೈಸೆಯಿಂದ 90 ರೂಪಾಯಿ 99 ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 81 ರೂಪಾಯಿ 47 ಪೈಸೆಯಿಂದ 81 ರೂಪಾಯಿ 30 ಪೈಸೆಗೆ ಇಳಿದಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 94 ರೂಪಾಯಿ 04 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 86 ರೂಪಾಯಿ 37 ಪೈಸೆಯಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದೇ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿನ ಇಳಿಕೆ ಕಾರಣವಾಗಿದೆ.

ಬರುವ ತಿಂಗಳು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳು ನಾಡು, ಕೇರಳ, ಪುದುಚೆರಿಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಇಂದಿನ ತೈಲ ಬೆಲೆ ಇಳಿಕೆಯು ಪರಿಣಾಮ ಬೀರಲಿದೆಯೆಂದು ಅಂದಾಜಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು