ಕೊಣಾಜೆ; ಅಕ್ರಮ ಗೋಸಾಗಾಟಗಾರರ ಬೆನ್ನತ್ತಿದ ಪೊಲೀಸರು, 9 ಗೋವುಗಳ ರಕ್ಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಣಾಜೆ(01-10-2020): ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಬೆನ್ನತ್ತಿದ ಪೊಲೀಸರು 9 ಗೋವುಗಳನ್ನು ರಕ್ಷಿಸಿ ಪಿಕ್ ಅಪ್ ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಸ್.ಐ ಮಲ್ಲಿಕಾರ್ಜುನ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಜಾಗರೂಕತೆಯಿಂದ ಚಲಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಪೊಲೀಸರ ತಂಡ ಬೆನ್ನತ್ತಿದೆ. ಈ ವೇಳೆಆರೋಪಿಗಳು ಪಿಕಪ್ ಬಿಟ್ಟು ಪರಾರಿಯಾಗಿದ್ದಾರೆ.

ಪಿಕ್ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಒಂಬತ್ತು ಗೋವುಗಳಿರುವುದು ಪತ್ತೆಯಾಗಿದೆ.ವಾಹನ ಮತ್ತು ಗೋವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು