ಕೋಮು ಬಣ್ಣ ನೀಡಲು ಮುಂದಾಗಿದ್ದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? : ಕಾಂಗ್ರೆಸ್ ಪ್ರಶ್ನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ತಮ್ಮ ಹಗರಣ ಮುಚ್ಚಿಕೊಳ್ಳಲು ಅಮಾಯಕ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಬಳಸಿ ಕೋಮು ಬಣ್ಣ ನೀಡಲು ಮುಂದಾಗಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್,
17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತಾಪ ಇಲ್ಲವೇ? ಅವರಿಗಾದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುವರಾ ಈಗ?
ಬೆಡ್ ಬ್ಲಾಕಿಂಗ್ ಹಗರಣದ ರಾಜ್ಯ ಬಿಜೆಪಿ ಪಕ್ಷದ ‘ಮೆಡಿಕಲ್ ಭಯೋತ್ಪಾದನೆ’ ಸತೀಶ್ ರೆಡ್ಡಿ ಆಪ್ತನ ಬಂಧನದಿಂದ ಸಾಭೀತಾಗಿದೆ ಎಂದು ಆರೋಪಿಸಿದೆ.

ತನ್ನ ಬೆಂಬಲಿಗರ ಮೂಲಕ ವಾರ್ ರೂಮ್‌ ಸಿಬ್ಬಂದಿಗಳನ್ನು ಬೆದರಿಸಿ, ನಿಯಂತ್ರಿಸಿ ದಂಧೆ ನಡೆಸುತ್ತಿದ್ದ ಕಿಂಗ್ ಪಿನ್ ಸತೀಶ್ ರೆಡ್ಡಿಯ ಬಂಧನದಿಂದ ಮಾತ್ರ ಪ್ರಕರಣ ಪೂರ್ಣ ಬಯಲಾಗಲು ಸಾಧ್ಯ. ಕರೋನಾ ಕಾಲಘಟ್ಟವನ್ನು ಬಿಜೆಪಿ ನಿರ್ಲಜ್ಜವಾಗಿ, ಅಮಾನವೀಯವಾಗಿ ತನ್ನ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದಿದೆ.

ಕೊರೊನಾ 1ನೇ ಅಲೆಯಲ್ಲಿ ಬೆಡ್ ಬಾಡಿಗೆ ಹಗರಣ
2ನೇ ಅಲೆಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ
ಜನ ಬೀದಿಯಲ್ಲಿ ನರಳಿ ಸಾಯುತ್ತಿರುವಾಗ ಬಿಜೆಪಿ ತನಗೆ ಸಿಕ್ಕ ಅಧಿಕಾರವನ್ನು ಭ್ರಷ್ಟಾಚಾರದ ಮೆಡಿಕಲ್ ಭಯೋತ್ಪಾದನೆಗೆ ಬಳಸಿಕೊಂಡಿದೆ. ರಾಜ್ಯ ಬಿಜೆಪಿ ಕೇವಲ ಬೆಡ್ ಬ್ಲಾಕಿಂಗ್ ಒಂದೇ ಅಲ್ಲ, ಆಕ್ಸಿಜನ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್, ರೆಮಿಡಿಸಿವಿರ್ ಬ್ಲಾಕಿಂಗ್‌ನ್ನೂ ನಡೆಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಆಗ್ರಹಿಸಿದೆ.

ಲಸಿಕೆ ನೀಡುವಿಕೆಯಲ್ಲಿ ಖಾಸಗಿ ಆಸ್ಪತ್ರೆಯೊಂದಿಗೆ ಸೇರಿದ ಸಂಸದ ತೇಜಸ್ವಿ ಸೂರ್ಯ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಗುಡುಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು