ಕೋಲ್ಕತ್ತಾ(23-12-2020): ವಯಸ್ಕ ಹೆಣ್ಣು ತನ್ನ ಇಚ್ಚೆಯಂತೆ ಮತಾಂತರಗೊಂಡು ವಿವಾಹವಾಗಬಹುದು ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
19 ವರ್ಷದ ಯುವತಿ ಅನ್ಯಧರ್ಮೀಯ ಯುವಕನನ್ನ ಪ್ರೀತಿಸಿ ವಿವಾಹವಾದ ಕೇಸ್ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಿಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ನೀಡಿದ್ದಾರೆ. ವಯಸ್ಕ ಹೆಣ್ಣು ಪತಿ ಜೊತೆ ವಾಸಿಸಸಲು ಬಯಸಿದರೆ, ಪತಿಯ ಧರ್ಮಕ್ಕೆ ಮತಾಂತರಕ್ಕೆ ಬಯಸಿದರೆ ತಡೆಯಲು ಸಾಧ್ಯವಿಲ್ಲ ಎಂದು ಗಮನಾರ್ಹ ತೀರ್ಪಿನಲ್ಲಿ ಹೈಕೋರ್ಟ್ ಹೇಳಿದೆ.
ಅನ್ಯ ಧರ್ಮದ ವ್ಯಕ್ತಿ ತನ್ನ ಮಗಳನ್ನು ವಂಚಿಸಿ ವಿವಾಹವಾಗಿದ್ದಾನೆ ಎಂದು 19ವರ್ಷದ ಯುವತಿಯ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು.