ಕೋಲಾರದಿಂದ ಬೆಂಗಳೂರಿಗೆ ಬಂದ ಯುವತಿ ಬಾವಿಯಲ್ಲಿ ಪತ್ತೆ: ಆಕೆಯನ್ನು ಬಾವಿಗೆ ತಳ್ಳಿದ್ದು ಯಾರು? ಆಕೆ ಬೆಂಗಳೂರಿಗೆ ಬಂದಿದ್ದೇಕೆ ಗೊತ್ತಾ?

kolara
Share on facebook
Share on twitter
Share on linkedin
Share on whatsapp
Share on telegram
Share on email
Share on print

ದೇವನಹಳ್ಳಿ(16-10-2020): ಕರ್ನಾಟಕದ ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ 22 ವರ್ಷದ ಯುವತಿಯೊಬ್ಬಳನ್ನು ಆಳವಾದ ಬಾವಿಗೆ ಪ್ರಿಯಕರ ತಳ್ಳಿಹಾಕಿದ್ದು ಆಕೆಯನ್ನು 3 ದಿನಗಳ ಬಳಿಕ ರಕ್ಷಿಸಲಾಗಿದೆ.

ಮಹಿಳೆ ಕೋಲಾರ ಜಿಲ್ಲೆಯ ಮಾಲೂರು ಮೂಲದವರಾಗಿದ್ದು, ಓರ್ವ ವ್ಯಕ್ತಿಯನ್ನು ಭೇಟಿಯಾಗಲು ಬಸ್ ಮೂಲಕ ಬೆಂಗಳೂರು ಗ್ರಾಮೀಣ ಜಿಲ್ಲೆಯ ದೇವನಹಳ್ಳಿಗೆ ಬಂದಿದ್ದರು. ಆದರ್ಶ್ (22) ಎಂಬಾತ ಒಂದು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಈಕೆಗೆ ಪರಿಚಯವಾಗಿದ್ದ. ಆತನನ್ನು ಭೇಟಿಯಾಗಲು ಯುವತಿ ದೇವನಹಳ್ಳಿಗೆ ಬಂದಿದ್ದಾಳೆ. ಸಂಜೆ 5: 30 ಕ್ಕೆ ದೇವನಹಳ್ಳಿಯಲ್ಲಿ ಆದರ್ಶ್ ಆಕೆಯನ್ನು ಭೇಟಿಯಾಗಿದ್ದು ಬಳಿಕ ಎ ರಂಗನಾಥಪುರ ಎಂಬ ಹಳ್ಳಿಯ ತೋಟದ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಆತ ಕರೆದುಕೊಂಡು ಬಂದಿದ್ದ.

ಪೊಲೀಸರ ಪ್ರಕಾರ, ಆದರ್ಶ್ ಯುವತಿಯನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಅವಳು ಪ್ರಸ್ತಾಪವನ್ನು ತಿರಸ್ಕರಿಸಿದಾಗ, ಅವನು ಯುವತಿಯನ್ನು ಬಾವಿಗೆ ತಳ್ಳಿ ಸಂಜೆ 7: 30 ರ ಸುಮಾರಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು