ಗೊಂದಲಗಳಿಗೆ ಫುಲ್ ಸ್ಟಾಫ್ ಕೊಟ್ಟ ಕೊಹ್ಲಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಮುಂಬೈ: ನನ್ನ ಮತ್ತು ರೋಹಿತ್ ಶರ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ದಕ್ಷಿಣ ಆಫ್ರಿಕಾದೊಂದಿಗೆ ಏಕದಿನ ಸರಣಿ ಆಡಲು ನಾನು ಸಿದ್ಧನಿದ್ದೇನೆ ಎಂದು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.  ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲು ವಿರಾಟ್ ಕೊಹ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸ್ಪಷ್ಟನೆ ನೀಡಿದ್ದಾರೆ.

ಏಕದಿನ ಸರಣಿ ಆಡಲು ನಾನು ಸಿದ್ಧ, ನಾನು ಬಿಸಿಸಿಐನಿಂದ ವಿಶ್ರಾಂತಿ ನೀಡಲು ಇದುವರೆಗೂ ಮನವಿ ಮಾಡಿಲ್ಲ, ನನಗೆ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.  ಏಕದಿನ ಸರಣಿಗೆ ಹೊಸ ನಾಯಕನನ್ನು ಘೋಷಿಸುವ ಮುನ್ನ ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು