ಕೊಚ್ಚಿ(16-12-2020): ಕೊಚ್ಚಿ ಕಾರ್ಫೋರೇಶನ್ ಚುನಾವಣೆಯಲ್ಲಿ ಯುಡಿಎಫ್ಗೆ ಭಾರಿ ಹೊಡೆತಬಿದ್ದಿದ್ದು, ಯುಡಿಎಫ್ ಮೇಯರ್ ಅಭ್ಯರ್ಥಿ 1 ಮತಗಳಿಂದ ಎನ್ ಡಿಎ ಅಭ್ಯರ್ಥಿ ಎದುರು ಸೋತಿದ್ದಾರೆ.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ 2020 ರ ಮತ ಎಣಿಕೆ ನಡೆಯುತ್ತಿದೆ. ಕೊಚ್ಚಿ ನಾರ್ತ್ ಐಲ್ಯಾಂಡ್ ವಾರ್ಡ್ನಲ್ಲಿ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಎಂದು ಬಿಂಬಿತ ಎನ್ ವೇಣುಗೋಪಾಲ್ ಬಿಜೆಪಿ ಅಭ್ಯರ್ಥಿ ಎದುರು ಒಂದು ಮತದಿಂದ ಸೋತಿದ್ದಾರೆ.
ಯುಡಿಎಫ್ ಕಳೆದ ಹತ್ತು ವರ್ಷಗಳಿಂದ ಕೊಚ್ಚಿ ಕಾರ್ಪೋರೇಶನನ್ನು ಆಳುತ್ತಿದೆ. ಏತನ್ಮಧ್ಯೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 46 ರಲ್ಲಿ, ಎಡಪಂಥೀಯರು 37 ಮತ್ತು ಎನ್ಡಿಎ 11 ಪುರಸಭೆಗಳ ಆರು ವಿಭಾಗಗಳಲ್ಲಿ ಮತ್ತು ಎರ್ನಾಕುಲಂನ ಕೊಚ್ಚಿ ನಿಗಮದಲ್ಲಿ ಮುನ್ನಡೆ ಸಾಧಿಸಿದೆ.