ಬೆಂಗಳೂರು(12-02-2020): ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಪುತ್ತೂರಿನ ಸುಹಾನ ಎಂಬ
ಯುವತಿಯನ್ನು ಕೆಎಂಸಿಸಿ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ 4ಗಂಟೆ 20 ನಿಮಿಷಗಳಲ್ಲಿ ತಲುಪಿಸಲಾಗಿದೆ.
ಕೆಎಂಸಿಸಿ ಆಂಬ್ಯುಲೆನ್ಸ್ ಚಾಲಕ ಹನೀಫ್ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಳಿಗ್ಗೆ 11ಗಂಟೆಗೆ ಸುಹಾನ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಇರಿಸಿ ಬೆಂಗಳೂರಿಗೆ ಹೊರಟಿದ್ದು, ಇದೀಗ ಬೆಂಗಳೂರಿಗೆ ತಲುಪಿದ್ದಾರೆ.
ಚಾರ್ಮಾಡಿ ಮೂಲಕ ಬೆಂಗಳೂರಿಗೆ ತೆರಳಿದ ಆಂಬ್ಯಲೆನ್ಸ್ ಗೆ ಮಾರ್ಗದ ಮಧ್ಯೆ ಜನರು ಟ್ರಾಫಿಕ್ ಕ್ಲಿಯರ್ ಮಾಡಿಸಿಕೊಟ್ಟಿದ್ದಾರೆ. ಪೊಲೀಸ್ ಇಲಾಖೆ, ಸಾಮಾಜಿಕ ಕಾರ್ಯಕರ್ತರು, ಎಲ್ಲರೂ ಟ್ರಾಫಿಕ್ ಕ್ಲಿಯರ್ ಮಾಡಿ ಸಹಕಾರವನ್ನು ಮಾಡಿದ್ದಾರೆ. ಈ ಮಧ್ಯೆ ಕರ್ನಾಟಕಕ್ಕೆ ಕರ್ನಾಟಕವೇ ಸುಹನಾ ಬದುಕಿ ಬಾ ಎಂದು ಪ್ರಾರ್ಥನೆ ಮಾಡಿದೆ.