ಕೋವಿಡ್ ಸೋಂಕು ಯಶಸ್ವಿಯಾಗಿ ನಿರ್ವಹಿಸಿದ ಕೆ.ಕೆ.ಶೈಲಜಾರಿಗೆ ಕೇರಳ ಸಂಪುಟದಲ್ಲಿ ಸ್ಥಾನವಿಲ್ಲ

Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರಂ: ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸಿ ಅಸಾಧಾರಣವಾಗಿ ನಿಭಾಯಿಸುವುದರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ್ದ ಸಿಪಿಎಂ ಹಿರಿಯ ನಾಯಕಿ ಮತ್ತು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಈ ಸಲ ಪಿಣರಾಯಿ ವಿಜಯನ್ ಸರ್ಕಾರದ ಎರಡನೇ ಅವಧಿಗೆ ಕೈಬಿಡಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ಹೊಸ ಸಂಪುಟದ ಎಲ್ಲಾ ಸಚಿವರು ಹೊಸಬರಾಗಿದ್ದು, ಅಚ್ಚರಿ ಮೂಡಿಸಿದೆ. ಮತ್ತೆ ಸಂಪುಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದ್ದ ಶೈಲಜಾ ಅವರನ್ನು ಸಹ ಈ ಬಾರಿ ಸಂಪುಟದಿಂದ ಹೊರಗಿಡಲಾಗಿದೆ.

ಆರೋಗ್ಯ ಸಚಿವ ಕೆ.ಕೆ.ಶೈಲಜಾ ಸೇರಿದಂತೆ ಎಲ್ಲ ಕುಳಿತ ಸಚಿವರನ್ನು ಕೈಬಿಡಲಾಗಿದೆ. ಪಕ್ಷವು ಸ್ಪೀಕರ್ ಅಭ್ಯರ್ಥಿಯಾಗಿ ಎಂಬಿ ರಾಜೇಶ್ ಮತ್ತು ಪಕ್ಷದ ವಿಪ್ ಆಗಿ ಕೆ.ಕೆ.ಶೈಲಜಾ ಅವರನ್ನು ಆಯ್ಕೆ ಮಾಡಿದೆ.
ಟಿಪಿ ರಾಮಕೃಷ್ಣನ್ ಅವರನ್ನು ಸಂಸದೀಯ ಪಕ್ಷದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ: ಸಿಪಿಐ (ಎಂ) ರಾಜ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಕೆ ಶೈಲಜಾ ಅವರನ್ನು ಸಂಪುಟದಿಂದ ಕೈಬಿಟ್ಟರೂ ಇಬ್ಬರು ಮಹಿಳೆಯರನ್ನು ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದಾರೆ. ಪಿಣರಾಯಿ ವಿಜಯನ್ ಒಬ್ಬರು ಒಬ್ಬರನ್ನು ಬಿಟ್ಟರೆ ಉಳಿದ ಹನ್ನೊಂದು ಸಚಿವರು ಹೊಸಬರು, ಇದು ಸಿಪಿಎಂ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು