ಅಬುಧಾಬಿ(08-10-2020):ಅಬುದಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ.
ಶೇಖ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ 20 ಓವರ್ಗಳಲ್ಲಿ 167 ರನ್ ಗಳಿಸಿ ಆಲ್ಔಟ್ ಆಯಿತು.
167 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ಮುಗ್ಗರಿಸಿದೆ. ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿದೆ.
ಚೆನ್ನೈ ಬೌಲರ್ಗಳಾದ ಡ್ವೇನ್ ಬ್ರಾವೊ ಅವರ ಅಮೋಘ ಬೌಲಿಂಗ್ ಎದುರಿಸುವಲ್ಲಿ ಕೆಕೆಆರ್ನ ಬಹುತೇಕ ಎಲ್ಲ ಬ್ಯಾಟ್ಸ್ಮನ್ಗಳೂ ವಿಫಲರಾದರು. ಆರಂಭಿಕ ಬ್ಯಾಟ್ಸ್ಮನ್ ರಾಹುಲ್ ತ್ರಿಪಾಠಿ ಏಕಾಂಗಿ ಹೋರಾಟದ ಫಲವಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಅಧಿಕ ಮೊತ್ತಗಳಿಸಿದೆ.
ಕೊಲ್ಕತ್ತಾ ಪರ ರಾಹುಲ್ ತ್ರಿಪಾಠಿ 81, ಸುನಿಲ್ ನರೈನ್ 17, ಪಾಟ್ ಕಮಿನ್ಸ್ 17 ರನ್ ಬಾರಿಸಿದ್ದಾರೆ. ಚೆನ್ನೈ ಪರ ಬೌಲಿಂಗ್ ನಲ್ಲಿ ಡ್ವೈನ್ ಬ್ರಾವೋ 3, ಕರ್ಣ್ ಶರ್ಮಾ ಮತ್ತು ಸಾನ್ ಕುರಾನ್ ತಲಾ 2 ವಿಕೆಟ್ ಪಡೆದಿದ್ದಾರೆ.
ಚೆನ್ನೈ ಪರ ಶೇನ್ ವಾಟ್ಸನ್ 50, ಅಂಬಟ್ಟಿ ರಾಯುಡು 30 ಮತ್ತು ರವೀಂದ್ರ ಜಡೇಜಾ ಅಜೇಯ 21 ರನ್ ಸಿಡಿಸಿದ್ದಾರೆ.