ಈ ದೇಶದಲ್ಲಿ ಒಬ್ಬನೇ ಒಬ್ಬ ಕೊರೋನಾ ರೋಗಿಯಿಲ್ಲ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಕೊರಿಯಾ(11-10-2020): ಉತ್ತರ ಕೊರಿಯಾದಲ್ಲಿ ಒಬ್ಬನೇ ಒಬ್ಬ ಕೊರೋನಾ ರೋಗಿ ಇಲ್ಲವೆಂದು ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಜನವರಿಯಲ್ಲೇ ದೇಶದ ಎಲ್ಲಾ ಗಡಿಗಳನ್ನು ಮುಚ್ಚಲಾಗಿತ್ತು. ಅಂದಿನಿಂದಲೂ ಉತ್ತರ ಕೊರಿಯಾವು ಸಂಪೂರ್ಣ ಕೊರೋನಾ ಮುಕ್ತ ದೇಶವಾಗಿದೆಯೆಂದು ಅವರು ವಾದಿಸಿದ್ದಾರೆ.

ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ 75ನೆಯ ಸ್ಥಾಪಕ ದಿನದ ಅಂಗವಾಗಿ ನಡೆದ ಸೈನಿಕ ಪೆರೇಡಿನಲ್ಲಿ ಅವರು ಮಾತನಾಡುತ್ತಿದ್ದರು. ಕೊರೋನಾ ಮಾರಿಯನ್ನು ಹಿಮ್ಮೆಟ್ಟಿಸಿರುವುದು ನಮ್ಮ ಪಕ್ಷದ ಗೆಲುವಾಗಿದೆಯೆಂದು ನಾನು ಭಾವಿಸುತ್ತೇನೆ. ಜನರು ಆರೋಗ್ಯದಿಂದಿರುವುದನ್ನು ಕಾಣಲು ಸಂತೋಷವಾಗುತ್ತಿದೆ. ಇದಕ್ಕಾಗಿ ನಿಮಗೆ ಧನ್ಯವಾದಗಳನ್ನು ಹೇಳುವುದು ಬಿಟ್ಟರೆ ಬೇರೆ ಮಾತುಗಳೇ ಹೊರಡುತ್ತಿಲ್ಲ. ಇದು ಉತ್ತರ ಕೊರಿಯನ್‌ ಜನರ ಬಲು ದೊಡ್ಡ ವಿಜಯವಾಗಿದೆಯೆಂದು ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ನಮ್ಮ ಪಕ್ಷಕ್ಕೆ ಜನರ ಪ್ರಾಣ ರಕ್ಷಣೆಯೇ ಎಲ್ಲಕ್ಕಿಂತಲೂ ಮುಖ್ಯವಾದದ್ದು. ಅವರ ಆರೋಗ್ಯಕರ ಜೀವನವು ನಮ್ಮ ಪಕ್ಷದ, ಸರಕಾರದ ಮತ್ತು ಜಗತ್ತಿನ ಅಡಿಪಾಯವಾಗಿದೆ ಎಂದು ಮಾಸ್ಕುಗಳನ್ನು ಧರಿಸದೇ ಸಾವಿರಾರು ಸೈನಿಕರು ಭಾಗವಹಿಸಿದ್ದ ಪೆರೇಡಿನಲ್ಲಿ ಅವರು ಹೇಳಿದರು.

ಪೆರೇಡಿನಲ್ಲಿ ಅಮೇರಿಕಾದ ರಕ್ಷಣಾ ವ್ಯೂಹವನ್ನು ಭೇದಿಸುವ ಸಾಮರ್ಥ್ಯವಿದೆಯೆನ್ನಲಾದ ಸ್ವದೇಶಿ ನಿರ್ಮಿತ ಖಂಡಾಂತರ ಬಾಲಿಸ್ಟಿಕ್ ಕ್ಷಿಪಣಿಯನ್ನು ಪ್ರದರ್ಶಿಸಲಾಯಿತು. ದೇಶವು ಕೊರೋನಾ ಮುಕ್ತವಾಗಿದೆಯೆಂದು ಉತ್ತರ ಕೊರಿಯಾವು ಜನವರಿಯಲ್ಲಿಯೇ ಘೋಷಿಸಿದ್ದರೂ ಕೂಡಾ, ಮಾಧ್ಯಮಗಳು ಅದಕ್ಕೆ ಅಷ್ಟೊಂದು ಮಹತ್ವ ನೀಡಿರಲಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು